ಪಬ್ಲಿಕ್‌ನಲ್ಲಿ ಲಾಂಗ್‌ ಹಿಡಿದು ಓಡಾಟ – ಆರೋಪಿಗಳ ಬಂಧನದ ಬಳಿಕ ಸಿಕ್ತು ಕೆಜಿಗಟ್ಟಲೇ ಗಾಂಜಾ!

1 Min Read

ದಾವಣಗೆರೆ: ಜನ ಸಂದಣಿ ಇರುವ ಸ್ಥಳದಲ್ಲಿ ಮುಚ್ಚು ಹಿಡಿದು ಓಡಾಡಿದ ಇಬ್ಬರು ಪುಂಡರನ್ನು ದಾವಣಗೆರೆ (Davanagere) ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಕೇಶ್ ಹಾಗೂ ಸಾಹಿಲ್ ಎಂದು ಗುರುತಿಸಲಾಗಿದೆ. ಬಂಧನದ ಬಳಿಕ ಇಬ್ಬರೂ ಗಾಂಜಾ ಪೆಡ್ಲರ್ ಎಂಬುದು ಬೆಳಕಿಗೆ ಬಂದಿದೆ. ದಾವಣಗೆರೆಯ ನಿಟ್ಟುವಳ್ಳಿ ಶ್ರೀರಾಮ ಬಡಾವಣೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಗಲಾಟೆಯಾಗಿತ್ತು. ಈ ವೇಳೆ ಯುವಕರ ಮೇಲೆ ಹಲ್ಲೆ ನಡೆಸಲು ಅಟೋದಲ್ಲಿ ಮಚ್ಚು, ಲಾಂಗ್ ಹಿಡಿದು ಇಬ್ಬರು ಬಂದಿದ್ದರು. ಇದನ್ನೂ ಓದಿ: ಸುಳ್ಯ | ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಮಗು ಕೆರೆಯಲ್ಲಿ ಶವವಾಗಿ ಪತ್ತೆ

ಸಿಸಿ ಕ್ಯಾಮೆರಾದಲ್ಲಿ ಇಬ್ಬರ ಪುಂಡಾಟ ಸೆರೆಯಾಗಿತ್ತು. ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಕೆ ಮಾಡಿದ್ದ ಲಾಂಗ್ ವಶಕ್ಕೆ ಪಡೆಯಲು ಹೋದಾಗ ರಾಕಿ ಹಾಗೂ ಸಾಹಿಲ್ ರೂಂ ನಲ್ಲಿ ಗಾಂಜಾ ಪತ್ತೆಯಾಗಿದೆ. ಪೊಲೀಸರು 60 ಸಾವಿರ ರೂ. ಮೌಲ್ಯದ 1 ಕೆಜಿಗೂ ಹೆಚ್ಚಿನ ಗಾಂಜಾ, 2 ಮಚ್ಚು ಸೇರಿದಂತೆ ಹಲವು ವಸ್ತುಗಳು ವಶಕ್ಕೆ ಪಡೆದಿದ್ದಾರೆ.‌ ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಮೆರಿಕ | ಮಾಜಿ ಬಾಯ್‌ಫ್ರೆಂಡ್‌ ಅಪಾರ್ಟ್‌ಮೆಂಟ್‌ಲ್ಲಿ ಭಾರತ ಮೂಲದ ಯುವತಿ ಶವ ಪತ್ತೆ

Share This Article