BWSSB ಅರೆಬರೆ ಕಾಮಗಾರಿ – ಗುಂಡಿಗೆ ಬಿದ್ದ ಬಾಲಕ ಬಲಿ

By
1 Min Read

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅರೆಬರೆ ಕಾಮಗಾರಿಗೆ ಬಾಲಕನೊಬ್ಬ ಬಲಿಯಾದ ಘಟನೆ ಬೆಂಗಳೂರಿನ (Bengaluru) ಮಾಗಡಿ (Magadi) ರಸ್ತೆಯ ಗೊಲ್ಲರಹಟ್ಟಿ ಪೈಪ್‌ಲೈನ್‌ನಲ್ಲಿ ನಡೆದಿದೆ.

ಎರಡೂವರೆ ವರ್ಷದ ಕಾರ್ತಿಕ್ ಮೃತ ಬಾಲಕ. ಕಾರ್ತಿಕ್ ಉತ್ತರ ಪ್ರದೇಶ (Uttar Pradesh) ಮೂಲದ ಹನುಮಾನ್ ದಂಪತಿಯ ಪುತ್ರನಾಗಿದ್ದು, ಕೂಲಿ ಕೆಲಸಕ್ಕಾಗಿ ಕುಟುಂಬ ಸಹಿತ ಬೆಂಗಳೂರಿಗೆ ಬಂದಿದ್ದರು. ಬಿಡಬ್ಲ್ಯುಎಸ್‌ಎಸ್‌ಬಿ ಕಾಮಗಾರಿಗಾಗಿ ಹೊಂಡ ತೆಗೆದಿದ್ದರು. ಕಾರ್ತಿಕ್ ಆಟವಾಡುತ್ತಾ ಅಚಾನಕ್ ಆಗಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಕೊರೊನಾ 

ಈ ಕುರಿತು ಬಿಡಬ್ಲುಎಸ್‌ಎಸ್‌ಬಿ ಎಂಜಿನಿಯರ್ ಹಾಗೂ ಕಾಂಟ್ರ್ಯಾಕ್ಟರ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ. ಇದನ್ನೂ ಓದಿ: ಹಳೆ ದ್ವೇಷ – ಮಡಿಕೇರಿಯಲ್ಲಿ ಗುಂಡೇಟಿಗೆ ವ್ಯಕ್ತಿ ಬಲಿ

Share This Article