ಅಸ್ಸಾಂನಲ್ಲಿ ಸುಖೋಯ್ Su-30 ವಿಮಾನ ಪತನ – ಇಬ್ಬರು ವಾಯುಪಡೆಯ ಪೈಲಟ್‌ಗಳು ಹುತಾತ್ಮ

1 Min Read

ದಿಸ್ಪುರ: ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುಖೋಯ್ ಸು-30 (Sukhoi Su-30) ಎಂಕೆಐ ಯುದ್ಧ ವಿಮಾನ ಪತನಗೊಂಡು ಇಬ್ಬರು ಭಾರತೀಯ ವಾಯುಪಡೆಯ (IAF) ಪೈಲಟ್‌ಗಳು ಹುತಾತ್ಮರಾಗಿದ್ದಾರೆ.

ಹುತಾತ್ಮರಾದ ಪೈಲಟ್‌ಗಳನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ ಎಂದು ವಾಯುಪಡೆ ತಿಳಿಸಿದೆ. ಇದನ್ನೂ ಓದಿ: ಶ್ರೀಲಂಕಾ ಬಳಿ ಮುಳುಗಿ ಸಂಕಷ್ಟದಲ್ಲಿದ್ದ ಇರಾನ್‌ ನೌಕೆಗೆ ಭಾರತದ ನೌಕಾಪಡೆ ಸಹಾಯ

 

Su-30 MKI ತರಬೇತಿ ಕಾರ್ಯಾಚರಣೆಯಲ್ಲಿತ್ತು. ಜೋರ್ಹತ್ ವಾಯುನೆಲೆಯಿಂದ ಹಾರಿದ ಸ್ವಲ್ಪ ಸಮಯದ ನಂತರ ನಾಪತ್ತೆಯಾಗಿತ್ತು. ಅದು ಪತನಗೊಂಡ ಸ್ಥಳದಿಂದ ಸುಮಾರು 60 ಕಿ.ಮೀ ದೂರದಲ್ಲಿತ್ತು.

ರಷ್ಯಾ ಮೂಲದ ವಿಮಾನದೊಂದಿಗಿನ ಸಂವಹನ ರಾತ್ರಿ 7:42 ಕ್ಕೆ ಕಳೆದುಹೋಗಿತ್ತು. ದೂರದ ಗುಡ್ಡಗಾಡು ಪ್ರದೇಶದಲ್ಲಿ ಅದು ಅಪ್ಪಳಿಸಿದೆ. ಬೆಟ್ಟದಿಂದ ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಬೆಂಕಿಯ ಉಂಡೆಯನ್ನೂ ಗಮನಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ವಿನಾಯಿತಿ ಕೊಟ್ಟ ಅಮೆರಿಕ

Share This Article