ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್ ಬಿಜೆಪಿ ಮಧ್ಯೆ ಟ್ವಿಟ್ಟರ್ ವಾರ್ ಆರಂಭವಾಗಿದ್ದು ಎರಡು ಪಕ್ಷಗಳು ವಿಡಿಯೋ ಫೈಟ್ ಈಗ ಫುಲ್ ವೈರಲ್ ಆಗಿದೆ.
ಯಡಿಯೂರಪ್ಪ ಕೊಡುಗೆ ಎಂಬ ಶೀರ್ಷಿಕೆಯಡಿ ಕಾಂಗ್ರೆಸ್ ಮೂರು ದಿನಗಳ ಹಿಂದೆ ವಿಡಿಯೋವೊಂದನ್ನು ರಿಲೀಸ್ ಮಾಡಿದೆ. ಇದರಲ್ಲಿ ಹಾವೇರಿ ಗೋಲಿಬಾರ್ ಪ್ರಕರಣದಿಂದ ರೆಡ್ಡಿ, ಯಡ್ಡಿ, ಚಡ್ಡಿಗಳ ಮೈನಿಂಗ್ ಹಗರಣ, ರೆಸಾರ್ಟ್ ರಾಜಕೀಯ, ಭ್ರಷ್ಟಚಾರದಡಿ ಜೈಲಿಗೆ ಹೋದ ಮೊದಲ ಮುಖ್ಯಮಂತ್ರಿ. ಇಂತಹ ಮುಖ್ಯಮಂತ್ರಿ ಕರ್ನಾಟಕಕ್ಕೆ ಬೇಕಾ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಕಾಂಗ್ರೆಸ್ ನವರ ಟ್ವಿಟ್ಟರ್ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ತಿರುಗೇಟು ನೀಡಿದ್ದು, `ಸಿದ್ದು ಬಿರಿಯಾನಿ’ ಎಂಬ ವಿಡಿಯೋವನ್ನು ರಿಲೀಸ್ ಮಾಡೋ ಮೂಲಕ ಟಾಂಗ್ ನೀಡಿದೆ. ಇದರಲ್ಲಿ ಗುಂಡೂರಾವ್ ಮಿಲ್ಟ್ರೀ ಹೋಟೆಲ್‍ನಲ್ಲಿ ಸಿದ್ದು ಬೀಫ್ ಬಿರಿಯಾನಿ ತಲೆಬರಹವಿದೆ.
ಸಿಎಂ ಸಿದ್ದರಾಮಯ್ಯ, ಗುಂಡೂರಾವ್, ಮಾಜಿ ಸಂಸದೆ ರಮ್ಯಾ ಫೋಟೋ ಟ್ಯಾಗ್ ಮಾಡಲಾಗಿದೆ. ಅನ್ನಭಾಗ್ಯದಿಂದ ಕದ್ದ ಅನ್ನ 1 ಕೆಜಿ, ಕಸಾಯಿಖಾನೆಯಿಂದ ತಂದ ದನದಮಾಂಸ 1 ಕೆಜಿ, ಹಿಂದುಗಳ ರಕ್ತ 2 ಲೀಟರ್, ಕಾವೇರಿ ಮತ್ತು ಮಹದಾಯಿ ನೀರು 4 ಲೀಟರ್, ಸ್ಟೀಲ್‍ಬ್ರಿಡ್ಜ್‍ಗೆ ಕಡಿದ ಮರದ ಕಟ್ಟಿಗೆ , ಕೊಲ್ಲೂರು ದೇವಸ್ಥಾನದಿಂದ ದೋಚಿದ ತುಪ್ಪ 1 ಕೆಜಿ, ಇಂದಿರಾ ಕ್ಯಾಂಟಿನ್‍ನಿಂದ ಈರುಳ್ಳಿ 2, ಸಿದ್ದು ಬೀಫ್ ರೆಡಿ ಅಂತಾ ವ್ಯಂಗ್ಯ ಮಾಡಿದ ವಿಡಿಯೋ ಬಿಜೆಪಿ ಕೂಡ ರಿಲೀಸ್ ಮಾಡಿದ್ದು, ಇದೀಗ ವೈರಲ್ ಆಗಿದೆ.
https://twitter.com/INCShivamogga/status/953645126386991104
Siddaramaiah led Congress govt has been the most anti-Hindu Govt in the history of K'taka. CM himself has repeatedly boasted of his anti-Hindu image. But of late, he has been trying hard to prove his Hindu credentials. But it is too late Mr. CM . Start packing your bags! pic.twitter.com/vdT9BTfVcL
— BJP Karnataka (@BJP4Karnataka) January 18, 2018
Here's a recipe for a BJP star campaigner. We don't recommend it. pic.twitter.com/j5lIAvc4Oa
— Congress (@INCIndia) January 11, 2018