ಕ್ರಿಕೆಟ್ ಲೆಜೆಂಡರಿ ಬೌಲರ್ ಪಾತ್ರದಲ್ಲಿ ಅನುಷ್ಕಾ ಶರ್ಮಾ

Public TV
2 Min Read

ಮುಂಬೈ: ಬಾಲಿವುಡ್ ನಟಿ-ನಿರ್ಮಾಪಕಿ ಅನುಷ್ಕಾ ಶರ್ಮಾ ವಾಮಿಕಾ ಹುಟ್ಟಿದ ನಂತರ ಇದೇ ಮೊದಲಬಾರಿಗೆ ತಮ್ಮ ಮುಂದಿನ ಪ್ರಾಜೆಕ್ಟ್ ಘೋಷಿಸಿದ್ದಾರೆ.

ಬಾಲಿವುಡ್ ನಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದಂತೆ ಹಲವು ಸಿನಿಮಾಗಳು ಬರುತ್ತಿವೆ. ಇದೀಗ ಭಾರತೀಯ ವನಿತಾ ಕ್ರಿಕೆಟ್ ನ ಲೆಜೆಂಡರಿ ಬೌಲರ್ ಜೂಲನ್ ಗೋಸ್ವಾಮಿ ಬಯೋಪಿಕ್ ಸಿದ್ಧವಾಗುತ್ತಿದ್ದು, ಈ ಪಾತ್ರದಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಅವರೇ ‘ಚಕ್ಡಾ ಎಕ್ಸ್‌ಪ್ರೆಸ್‌’ ಸಿನಿಮಾದ ಟೈಟಲ್ ಪೋಸ್ಟರ್ ಮತ್ತು ಟೀಸರ್ ಅನ್ನು ಅನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾ ನೆಟ್‍ಫ್ಲಿಕ್ಸ್ ಓಟಿಟಿಯಲ್ಲಿ ಬರಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಾಪ್‌ ದುಬಾರಿ ಬಜೆಟ್‌ ಸಿನಿಮಾಗಳಿಗೆ ಕೋವಿಡ್‌ ಶಾಕ್‌ – ರಿಲೀಸ್‌ ಡೇಟ್‌ ಮುಂದಕ್ಕೆ 

 

ಈ ಕುರಿತು ಅನುಷ್ಕಾ ಟ್ವಿಟ್ಟರ್ ನಲ್ಲಿ, ಇದು ನಿಜವಾಗಿಯೂ ವಿಶೇಷ ಸಿನಿಮಾವಾಗಿದೆ. ಏಕೆಂದರೆ ಇದು ಅದ್ಭುತ ತ್ಯಾಗದ ಕಥೆಯಾಗಿದೆ. ಮಾಜಿ ಭಾರತೀಯ ನಾಯಕಿ ಜೂಲನ್ ಗೋಸ್ವಾಮಿ ಅವರ ಜೀವನ ಆಧಾರಿತ ಕಥೆಯೇ ‘ಚಕ್ಡಾ ಎಕ್ಸ್‌ಪ್ರೆಸ್‌’. ಇದು ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಕಣ್ಣು ತೆರೆಸಿದ ಕಥೆ. ಜೂಲನ್ ಅವರು ಕ್ರಿಕೆಟರ್ ಆಗಲು ಮತ್ತು ಜಾಗತಿಕ ವೇದಿಕೆಯಲ್ಲಿ ತನ್ನ ದೇಶವನ್ನು ಹೆಮ್ಮೆಪಡಲು ನಿರ್ಧರಿಸಿದ್ದರು. ಆದರೆ ಆ ಸಮಯದಲ್ಲಿ ಕ್ರೀಡೆಯನ್ನು ಆಡುವ ಬಗ್ಗೆ ಮಹಿಳೆಯರು ಯೋಚಿಸುವುದು ತುಂಬಾ ಕಠಿಣವಾಗಿತ್ತು. ಆ ಸಮಯದಲ್ಲಿ ಅವರು ಎದುರಿಸಿದ ಕಠಿಣ ಸಮಯವನ್ನು ಈ ಚಿತ್ರ ನಿಮ್ಮ ಕಣ್ಣು ಮುಂದೆ ತೋರಿಸುತ್ತದೆ. ಜೂಲನ್ ಅವರ ಜೀವನ ಮತ್ತು ಮಹಿಳಾ ಕ್ರಿಕೆಟ್ ಅನ್ನು ರೂಪಿಸಿದ ಹಲವಾರು ನಿದರ್ಶನಗಳು ಈ ಸಿನಿಮಾ ಪ್ರೇಕ್ಷಕರಿಗೆ ತಿಳಿಯುತ್ತೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್‍ನಲ್ಲಿ ಭವಿಷ್ಯವನ್ನು ಹೊಂದಲು, ಅದನ್ನೆ ತನ್ನ ವೃತ್ತಿಯಾಗಿ ತೆಗೆದುಕೊಂಡವರಲ್ಲಿ ಭಾರತದ ಮಹಿಳೆಯರು ಬಹಳ ಕಡಿಮೆ. ಜೂಲನ್ ಅವರು ಹೋರಾಟದಿಂದ ಇಂದು ಹಲವು ಮಹಿಳೆಯರು ಕ್ರಿಕೆಟ್ ಅನ್ನು ತಮ್ಮ ವೃತ್ತಿ ಜೀವನವಾಗಿ ಸ್ವೀಕರಿಸುತ್ತಿದ್ದಾರೆ. ಅದು ಅಲ್ಲದೇ ಅವರು ತಮ್ಮ ದೇಶವನ್ನು ಹೆಮ್ಮೆ ಪಡುವಂತೆ ಪ್ರೇರೇಪಿಸಿದ್ದರು. ಮಹಿಳೆಯರು ಭಾರತದಲ್ಲಿ ಕ್ರಿಕೆಟ್ ನಲ್ಲಿ ವೃತ್ತಿಜೀವನವನ್ನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಅವರು ಬದಲಾಯಿಸಿದರು. ಅದಕ್ಕಾಗಿ ಅವರು ತುಂಬಾ ಶ್ರಮಿಸಿದ್ದಾರೆ. ಅವರ ಪರಿಶ್ರಮದಿಂದ ಈಗ ಕ್ರಿಕೆಟ್ ಆಡುವ ಹುಡುಗಿಯರಿಗೆ ಉತ್ತಮ ಆಟದ ಮೈದಾನ ಸಿಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕಿ ಮನೆಯಲ್ಲಿ ಕಳ್ಳತನ – ಗೋಡೆ ಮೇಲೆ ಅಶ್ಲೀಲ ಚಿತ್ರ ಬಿಡಿಸಿ ವಿಕೃತಿ

ಅನುಷ್ಕಾ ಅವರು 2018 ರಲ್ಲಿ ಬಿಡುಗಡೆಯಾದ ಆನಂದ್ ಎಲ್ ರೈ ನಿರ್ದೇಶನದ ‘ಝೀರೋ’ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆದರೆ ಇಂದು, ಅನುಷ್ಕಾ ಅವರು ತಮ್ಮ ಮುಂಬರುವ ಚಿತ್ರ ‘ಚಕ್ಡಾ ಎಕ್ಸ್‌ಪ್ರೆಸ್‌’ ನ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *