ವೈಟ್ ಫೀಲ್ಡ್ ಟೆಕ್ಕಿ ಕೇಸ್‌ಗೆ ಟ್ವಿಸ್ಟ್ – ಭಾರತ ಪರ ಕೂಗಿದ್ದಾಗ ಯಾರು ಹೊರ ಬರದಿದ್ದಕ್ಕೆ ಬೇಸತ್ತು ಪಾಕ್ ಪರ ಘೋಷಣೆ

Public TV
1 Min Read

ಬೆಂಗಳೂರು: `ಆಪರೇಷನ್ ಸಿಂಧೂರ’ (Operation Sindoor) ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಟೆಕ್ಕಿಯೊಬ್ಬನನ್ನ ಬಂಧಿಸಿದ್ದ ಕೇಸ್‌ಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಭಾರತ (India) ಪರ ಕೂಗಿದ್ದಾಗ ಯಾರು ಹೊರ ಬರದಿದ್ದಕ್ಕೆ ಬೇಸತ್ತು ಪಾಕ್ ಪರ ಘೋಷಣೆ ಕೂಗಿರುವುದಾಗಿ ತನಿಖೆ ವೇಳೆ ಬಯಲಾಗಿದೆ.

ಶುಭಾಂಶು ಶುಕ್ಲಾ (26) ಬಂಧಿತ ಆರೋಪಿ. ಛತ್ತಿಸ್‌ಗಢ (Chhattisgarh) ಮೂಲದ ಶುಕ್ಲಾ ಬೆಂಗಳೂರಿನಲ್ಲಿ (Bengaluru) ಟೆಕ್ಕಿ ಆಗಿ ಕೆಲಸ ಮಾಡಿಕೊಂಡಿದ್ದು, ವೈಟ್‌ಫೀಲ್ಡ್ನ ಪ್ರಶಾಂತ್ ಲೇಔಟ್‌ನಲ್ಲಿ ವಾಸಿಸುತ್ತಿದ್ದ. ಮೇ 9ರಂದು ಈ ಬಡಾವಣೆಯಲ್ಲಿ `ಆಪರೇಷನ್ ಸಿಂಧೂರ’ ವಿಜಯೋತ್ಸವ ಆಚರಿಸಲಾಗುತ್ತಿತ್ತು.ಇದನ್ನೂ ಓದಿ: ಏ.22ರಿಂದ ಮೇ 12 ರವರೆಗೆ ಮೋದಿ ಎಲ್ಲಿಗೆ ಹೋಗಿದ್ರು – ಬಹಿರಂಗ ಪಡಿಸುವಂತೆ ಪ್ರಿಯಾಂಕ್ ಆಗ್ರಹ

ಬಡಾವಣೆ ನಿವಾಸಿಗಳು ಸಂಭ್ರಮಾಚರಣೆ ನಡೆಸುವ ವೇಳೆ ಪಿಜಿಯಲ್ಲೇ ಇದ್ದ ಶುಭಾಂಶು ಬಾಲ್ಕನಿಗೆ ಬಂದಿದ್ದ. ಈ ವೇಳೆ ವಿಜಯೋತ್ಸವವನ್ನು ಕಂಡು ಖುಷಿಯಲ್ಲಿ ಭಾರತದ ಪರ ಘೋಷಣೆ ಕೂಗಿದ್ದ. ಆದರೆ ಯಾರೂ ಬಾಲ್ಕನಿಗೆ ಬರದಿದ್ದನ್ನು ನೋಡಿ ಬೇಸತ್ತ ಟೆಕ್ಕಿ, ಪಾಕಿಸ್ತಾನ ಪರ ಘೋಷಣೆ ಕೂಗಿ ನೋಡೋಣ ಎಂದುಕೊಂಡು, ಜೋರಾಗಿ ಕೂಗಿದ್ದಾನೆ. ಆತನ ಪಿಜಿಯಲ್ಲಿರುವವರು ಕಿಟಕಿಯಿಂದ ಘೋಷಣೆ ಕೂಗುವುದನ್ನು ವಿಡಿಯೋ ಮಾಡಿಕೊಂಡು ಬಳಿಕ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ನಂತರ ಸ್ಥಳಕ್ಕೆ ಬಂದ ವೈಟ್‌ಫೀಲ್ಡ್ ಪೊಲೀಸರು ಆತನನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ವಿಚಾರಣೆ ವೇಳೆ ಶುಭಾಂಶು ಪಾಕ್ ಪರ ಘೋಷಣೆ ಕೂಗಿರೋದು ದೃಢಪಟ್ಟಿದ್ದು, ಭಾರತ ಪರ ಘೋಷಣೆ ಕೂಗಿದಾಗ ಯಾರೂ ಹೊರ ಬರದಿದ್ದಕ್ಕೆ ಪಾಕ್ ಪರ ಕೂಗಿರುವುದಾಗಿ ಬೆಳಕಿಗೆ ಬಂದಿದೆ.ಇದನ್ನೂ ಓದಿ: ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ

Share This Article