ಬೆಂಗಳೂರು: ತಾಳಿ ಕಟ್ಟುವ ವೇಳೆ ವಧುವಿನ ಪ್ರಿಯಕರ ದಿಢೀರ್ ಎಂದು ಮದುವೆ ಮನೆಗೆ ಎಂಟ್ರಿಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರೇ ಮುಂದೇ ನಿಂತು ಪ್ರೇಮಿಗಳಿಗೆ ಮದುವೆ ಮಾಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರದ ನೆಲಮಂಗಲ ಪಟ್ಟಣದ ವಿಶ್ವಶಾಂತಿ ಸಮುದಾಯ ಭವನದಲ್ಲಿ ಭಾನುವಾರ ಈ ಘಟನೆ ನಡೆದಿತ್ತು. ನಂದಾರಾಮಯ್ಯನಪಾಳ್ಯ ನಿವಾಸಿ ರಂಗನಾಥ್ ಹಾಗೂ ಬೆಂಗಳೂರಿನಿಂದ ಕಾಮಾಕ್ಷಿಪಾಳ್ಯ ಯುವತಿ ಪದ್ಮಪ್ರಿಯ ಎಂಬವರ ವಿವಾಹ ನಡೆಯುತ್ತಿತ್ತು. ರಾತ್ರಿ ಆರತಕ್ಷತೆ ಭರ್ಜರಿಯಾಗಿ ನಡೆದಿದ್ದು, ಮರುದಿನ ಅಂದರೆ ತಾಳಿಕಟ್ಟುವ ವೇಳೆಗೆ ಅಲ್ಲಿಗೆ ವಧುವಿನ ಪ್ರಿಯಕರ ಸಂಜು ಪ್ರತ್ಯಕ್ಷವಾಗಿದ್ದನು. ಹಾಗಾಗಿ ವಧು ಪದ್ಮಪ್ರೀಯ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಮದುವೆ ನಿರಾಕರಿಸಿದ್ದಳು ಎಂದು ವರನ ಸಂಬಂಧಿ ವೆಂಕಟೇಶ್ ಹೇಳಿದ್ದರು.
ಸಂಜು ಹಾಗೂ ಪದ್ಮಪ್ರಿಯಾ ಇಬ್ಬರು ಹಲವು ವರ್ಷಗಳ ಹಿಂದೆ ಫೇಸ್ ಬುಕ್ ನಲ್ಲಿ ಪರಿಚಯವಾಗಿ ಪ್ರೀತಿ ಮಾಡುತ್ತಿದ್ದರು. ಇದನ್ನ ತಿಳಿದಿದ್ದ ಆಕೆಯ ಪೋಷಕರು ರಂಗನಾಥ್‍ನೊಂದಿಗೆ ಮದುವೆ ನಿಶ್ಚಯಿಸಿದ್ದರು. ಪ್ರಿಯಕರ ಬಂದಿದ್ದರಿಂದ ಎರಡು ಕುಟುಂಬದವರ ನಡುವೆ ಕೆಲಕಾಲ ಗಲಾಟೆ ನಡೆದಿತ್ತು.
ಬಳಿಕ ಸ್ಥಳಕ್ಕಾಗಮಿಸಿದ ನೆಲಮಂಗಲ ಪಟ್ಟಣ ಪೊಲೀಸರು ಪ್ರಿಯಕರ ಸಂಜು ಹಾಗೂ ಪದ್ಮಪ್ರಿಯಾ ಇಬ್ಬರನ್ನು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆದರೆ ಅಲ್ಲಿ ಸ್ಟೋರಿ ಟ್ವಿಸ್ಟ್ ಪಡೆದು ನಿಮ್ಮ ತಂದೆ ತಾಯಿ ಬಂದರೆ ಮಾತ್ರ ನಿನ್ನ ಜೊತೆ ಬರುವುದಾಗಿ ಪದ್ಮಪ್ರಿಯಾ ಪ್ರಿಯಕರನಿಗೆ ತಿಳಿಸಿದ್ದಾಳೆ.
ಕೊನೆಗೆ ನೆಲಮಂಗಲ ಪಟ್ಟಣ ಗಣೇಶನಗುಡಿಯಲ್ಲಿ ಸ್ನೇಹಿತರು ಹಾಗೂ ಕೆಲ ಸಂಬಂಧಿಗಳ ಸಮ್ಮುಖದಲ್ಲಿ ಪ್ರೇಮಿಗಳ ಮದುವೆ ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews