ನವದೆಹಲಿ: ಕುಂಭಮೇಳದಲ್ಲಿ (Kumbhmela) ವೈರಲ್ ಆಗಿದ್ದ ಮೊನಾಲಿಸಾ (Monalisa) ಪತಿ ಫರ್ಮಾನ್ ಖಾನ್ (Farman Khan) ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಇತ್ತೀಚಿಗಷ್ಟೇ ಕುಂಭಮೇಳದ ಮೊನಾಲಿಸಾ ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆ ಮದುವೆಯಾಗಿದ್ದರು. ಇದೀಗ ಆಘಾತಕಾರಿ ಸುದ್ದಿಯೊಂದು ಬಯಲಾಗಿದ್ದು, ಮೊನಾಲಿಸಾ ಮದುವೆ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದಳು ಎಂದು ತಿಳಿದುಬಂದಿದೆ. ಈ ಸಂಬಂಧ ಮಧ್ಯಪ್ರದೇಶದ (Madhyapradesh) ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಪ್ರಕರಣ (POCSO Case) ದಾಖಲಾಗಿದೆ. ಇದನ್ನೂ ಓದಿ: ಪ್ರಿಯಕರ ಫರ್ಮಾನ್ ಖಾನ್ ಜೊತೆ ಕುಂಭಮೇಳದ ವೈರಲ್ ತಾರೆ ಮೊನಾಲಿಸಾ ಮದುವೆ
ತನಿಖೆ ಶುರುವಾಗಿದ್ದು ಯಾಕೆ?
ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಮದುವೆಯಾದ ಸಂದರ್ಭದಲ್ಲಿ ಲವ್ ಜಿಹಾದ್, ಅವರ ವಯಸ್ಸು ಸೇರಿದಂತೆ ಹಲವು ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು NCST (ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ) ಕೇರಳ ಮತ್ತು ಮಧ್ಯಪ್ರದೇಶದಲ್ಲಿ ವಿಸ್ತಾರವಾದ ತನಿಖೆ ಆರಂಭಿಸಿತ್ತು.
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ಅವರು ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಈ ವಿಷಯ ಬಯಲಾಗಿದೆ. ಮೊನಾಲಿಸಾ ಪಾರ್ಧಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ಮದುವೆ ಸಂದರ್ಭದಲ್ಲಿ ಅವರಿಗೆ 18 ವರ್ಷ ತುಂಬಿರಲಿಲ್ಲ, ಅಪ್ತಾಪ್ರೆಯಾಗಿದ್ದರು. ಇನ್ನೂ ಮಹೇಶ್ವರದಲ್ಲಿನ ಆಸ್ಪತ್ರೆ ದಾಖಲೆಗಳ ಪ್ರಕಾರ, ಮೊನಾಲಿಸಾ 2009ರ ಡಿಸೆಂಬರ್ 30ರಂದು ಜನಿಸಿದ್ದು, 2026ರ ಮಾರ್ಚ್ 11ರಂದು ಮದುವೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮೊನಾಲಿಸಾಗೆ ಕೇವಲ 16 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.
ಇನ್ನೂ ಕೇರಳದಲ್ಲಿ (Kerala) ಮದುವೆಯಾಗುವಾಗ ಮೊನಾಲಿಸಾಗೆ 18 ವರ್ಷ ತುಂಬಿದೆ ಎಂದು ತೋರಿಸಲು ನಕಲಿ ಜನನ ಪ್ರಮಾಣಪತ್ರ ಬಳಸಿದ್ದಾರೆ. ಹೀಗಾಗಿ ದೇವಾಲಯದ ಅಧಿಕಾರಿಗಳು ಒದಗಿಸಿದ ದಾಖಲೆಯನ್ನಿಟ್ಟುಕೊಂಡು ಮದುವೆ ಮಾಡಿಸಿದ್ದಾರೆ. ಜೊತೆಗೆ ನಕಲಿ ದಾಖಲೆಗಳ ಆಧಾರದ ಮೇಲೆ ಕೇರಳದ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮದುವೆಯನ್ನು ನೋಂದಣಿ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಮದುವೆಗೆ ಬಲವಂತ ಆರೋಪ; ಪೊಲೀಸ್ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
ತನಿಖೆಯ ಬಳಿಕ ಪೊಲೀಸರು ಫರ್ಮಾನ್ ಖಾನ್ ವಿರುದ್ಧ ಬಿಎನ್ಎಸ್ ಸೆಕ್ಷನ್ ಪೋಕ್ಸೊ ಕಾಯ್ದೆ, ಎಸ್ಸಿ/ಎಸ್ಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಪ್ರಕರಣದಲ್ಲಿ ಯಾವುದಾದರೂ ಸಂಸ್ಥೆ ಹಾಗೂ ವ್ಯಕ್ತಿಗಳು ಭಾಗಿಯಾಗಿದ್ದಾರಾ ಎಂದು ತನಿಖೆ ನಡೆಸಬೇಕಿದೆ. ಇನ್ನೂ ಎನ್ಸಿಎಸ್ಟಿ ಕೇರಳ ಮತ್ತು ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ್ದು, ಏ.22ರಂದು ನವದೆಹಲಿಯ ಆಯೋಗದ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ಕಳೆದ ವರ್ಷ ಪ್ರಯಾಗ್ರಾಜ್ನಲ್ಲಿ ನಡೆದಿದ್ದ ಕುಂಭಮೇಳದಲ್ಲಿ ಮೊನಾಲಿಸಾ ಎಂಬ ಹುಡುಗಿ ರುದ್ರಾಕ್ಷಿ ಮಾರುತ್ತಾ ತನ್ನ ಕಣ್ಣುಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದಳು. ಅದೇ ಮೊನಾಲಿಸಾ ಬೋಂಸ್ಲೆ 2026ರ ಮಾರ್ಚ್ 11ರಂದು ಕೇರಳದ ಪೂವಾರ್ನ ಅರುಮಾನೂರ್ ನೈನಾರ್ ದೇಗುಲದಲ್ಲಿ ಪ್ರಿಯಕರ ಫರ್ಮಾನ್ ಖಾನ್ ಜೊತೆ ಮದುವೆಯಾಗಿದ್ದರು.ಇದನ್ನೂ ಓದಿ: ರೊಮ್ಯಾಂಟಿಕ್ ಸಾಂಗ್ನಲ್ಲಿ ಕುಂಭಮೇಳದ ನೀಲಿ ಕಂಗಳ ಚೆಲುವೆ – ದಿಲ್ ಕದ್ದ ಮೊನಾಲಿಸಾ!

