ಹೊಳೆಯಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್- ಆಂಟಿ ಪ್ರೀತಿಗೆ ಬಿತ್ತು ಹೆಣ!

Public TV
1 Min Read

ಆನೇಕಲ್ (ಬೆಂಗಳೂರು): ಆನೇಕಲ್ (Anekal) ಮುಗಳೂರು ಹೊಳೆಯಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಕೋಲಾರ (Kolar) ಮಾಲೂರು ತಾಲೂಕಿನ ಅಯ್ಯಪ್ಪನಗರ ಚೇತನ್ ಕೊಲೆಯಾದ ಯುವಕ. ಈತ ಅಯ್ಯಪ್ಪನಗರದ ಪ್ರಕಾಶ್ ರೆಡ್ಡಿ ಮಗನಾಗಿದ್ದು, ಈತನನ್ನು ಮಾಲೂರು ಸೊನ್ನಾಪುರ ಗ್ರಾಮದ ಸತೀಶ್ ಕೊಲೆ ಮಾಡಿದ್ದಾನೆ.

ಕಳೆದ ತಿಂಗಳು 26 ರಂದು ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಶವ ಪತ್ತೆಯಾಗಿತ್ತು. ಬ್ರಿಡ್ಜ್‍ನ ತಡೆಗೋಡೆ ಮೇಲೆ ರಕ್ತದ ಕಲೆಗಳು ಪತ್ತೆಯಾಗಿತ್ತು. ಈ ಸಂಬಂಧ ಸತೀಶ್, ಶಶಿ ಹಾಗೂ ಶೋಭಾ ಎಂಬ ಮೂವರು ಆರೋಪಿಗಳನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದರು. ತನಿಖೆಯ ವೇಳೆ ಆರೋಪಿಗಳು ಸತ್ಯ ಬಾಯಿಬಿಟ್ಟಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ವೃತ್ತಕ್ಕೆ ಸಿಎಂ ಹೆಸರು – ನಾಮಫಲಕ ತೆರವು ಮಾಡಿದ ಪೊಲೀಸರು

ಕಳೆದು ತಿಂಗಳು 7 ರಂದು ಶೋಭಾ ಮೂಲಕ ಚೇತನ್, ಸತೀಶ್ ಪರಿಚಯವಾಗಿದೆ. ಪರಿಚಯದ ನಂತರ ಒಂದು ದಿನ ಎಣ್ಣೆ ಪಾರ್ಟಿ ನಡೆದಿದೆ. ಹೊಸಕೋಟೆ ಐಶ್ವರ್ಯ ಬಾರ್ ನಲ್ಲಿ ಎಣ್ಣೆ ಪಾರ್ಟಿ ಮುಗಿಸಿ ಮಧ್ಯರಾತ್ರಿ 2 ಗಂಟೆಗೆ ಚೇತನ್‍ನನ್ನು ಮಚ್ಚಿನಿಂದ ಹೊಡೆದು ಮುಗಳೂರು ಹೊಳೆಗೆ ಎಸೆದಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಈ ಹಿಂದೆ ಅತ್ತಿಬೆಲೆ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆರೋಪಿ ಶೋಭಾ, ಈ ಬಾರಿ ತನ್ನ ಮಾಸ್ಟರ್ ಪ್ಲಾನ್ ನಿಂದಾಗಿ ಇಬ್ಬರ ಭವಿಷ್ಯ ಹಾಳು ಮಾಡಿದ್ದಾಳೆ. ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article