ಶ್ರೀರಂಗಪಟ್ಟಣದಲ್ಲಿ ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಸಾವು

Public TV
1 Min Read

ಮಂಡ್ಯ: ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪೂಜಾ, ಪ್ರಸನ್ನ ದಂಪತಿ ಮಕ್ಕಳಾದ ತ್ರಿಶುಲ್ ಹಾಗೂ ತ್ರಿಶ ಸಾವನ್ನಪ್ಪಿದ ಕಂದಮ್ಮಗಳು. ನಿನ್ನೆ ಮಧ್ಯಾಹ್ನ ಮಕ್ಕಳಿಗೆ ತಾಯಿ ಐಸ್‌ಕ್ರೀಂ ತಿನ್ನಿಸಿದ್ದರು. ತಳ್ಳುವ ಗಾಡಿಯಾತನಿಂದ ಐಸ್‌ಕ್ರೀಂ ಕೊಡಿಸಿದ್ದರು. ಆನಂತರ ಮಕ್ಕಳು ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

ಗ್ರಾಮದಲ್ಲಿ ಬೇರೆ ಮಕ್ಕಳು ಕೂಡ ಐಸ್‌ಕ್ರೀಂ ‌ತಿಂದಿದ್ದರು. ಐಸ್‌ಕ್ರೀಂ ತಿಂದ ಬೇರೆ ಯಾರಿಗೂ ತೊಂದರೆ ಆಗಿಲ್ಲ. ಅವಳಿ ಮಕ್ಕಳ ಸಾವಿಗೆ ಇದುವರೆಗೂ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ.

ಮಿಮ್ಸ್ ಆಸ್ಪತ್ರೆಗೆ ಶವಗಳನ್ನು ರವಾನಿಸಲಾಗಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಲಂಡನ್‌, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ

Share This Article