ಡ್ರಂಕ್ ಆ್ಯಂಡ್ ಡ್ರೈವ್ – ಪೊಲೀಸ್ ಕೆನ್ನೆಗೆ ಬಾರಿಸಿದ ನಟಿ ವಿರುದ್ಧ ಎಫ್‍ಐಆರ್

Public TV
1 Min Read

ಮುಂಬೈ: ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ಕೆನ್ನೆಗೆ ಬಾರಿಸಿದ್ದು ಮತ್ತು ಡ್ರಂಕ್ ಆ್ಯಂಡ್ ಡ್ರೈವ್ ಆರೋಪದಡಿಯಲ್ಲಿ ನಟಿ ರೂಹಿ ಸಿಂಗ್ ಸೇರಿದಂತೆ ಐವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಟಿ ರೂಹಿ ಸಿಂಗ್ ಗೆಳೆಯರಾದ ರಾಹುಲ್ ಸಿಂಗ್ ಮತ್ತು ಸ್ವಪ್ನಿಲ್ ಸಿಂಗ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೂಹಿ ಸಿಂಗ್ ನೋಟಿಸ್ ನೀಡಲಾಗಿದೆ.

ಸೋಮವಾರ ರಾತ್ರಿ ರೂಹಿ ಸಿಂಗ್ ತನ್ನ ನಾಲ್ವರು ಗೆಳೆಯರೊಂದಿಗೆ ಪಬ್ ನಿಂದ ಮನೆಗೆ ಹಿಂದಿರುಗಿತ್ತಿದ್ದರು. ತಡರಾತ್ರಿ ಬಾಂದ್ರಾದಲ್ಲಿರುವ ಮಾಲ್ ಬಳಿ ಕಾರ್ ನಿಲ್ಲಿಸಿದ್ದಾರೆ. ಶೌಚಾಲಯ ಬಳಸಬೇಕೆಂದು ಮಾಲ್ ಒಳಗಡೆ ಹೋಗಲು ಪ್ರಯತ್ನಿಸಿದ್ದಾರೆ. ತಡರಾತ್ರಿಯಾದ ಹಿನ್ನೆಲೆಯಲ್ಲಿ ಮಾಲ್ ಭದ್ರತಾ ಸಿಬ್ಬಂದಿ ನಟಿಗೆ ಪ್ರವೇಶ ನಿರಾಕರಿಸಿದ್ದಾರೆ. ಪ್ರವೇಶ ನಿರಾಕರಿಸಿದ್ದರಿಂದ ನಟಿ ಮತ್ತು ಸಿಬ್ಬಂದಿ ನಡುವೆ ಜಗಳ ನಡೆದಿದೆ.

ಜಗಳ ವಿಕೋಪ ತಿರುಗುತ್ತಿದ್ದಂತೆ ಮಾಲ್ ಸಿಬ್ಬಂದಿ ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ರೂಹಿ, ರಾಹುಲ್ ಮತ್ತು ಸ್ವಪ್ನಿಲ್ ಕರ್ತವ್ಯನಿರತ ಇಬ್ಬರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ಮಾಲ್ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ರೂಹಿ ಮತ್ತು ಇಬ್ಬರು ಗೆಳೆಯರಿಗೆ ಅಲ್ಲಿಂದ ತೆರಳಲು ಅನುಮತಿ ನೀಡಿ, ರಾಹುಲ್ ಹಾಗೂ ಸ್ವಪ್ನಿಲ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರಿಂದ ಅನುಮತಿ ಪಡೆದು ಕಾರಿನಲ್ಲಿ ಹೊರಟ ರೂಹಿ ನಿಲ್ಲಿಸಲಾಗಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಸಂಬಂಧ ಅತಿ ವೇಗ ಮತ್ತು ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಮದು ಡಿಸಿಪಿ ಪರಮಜಿತ್ ಸಿಂಗ್ ತಿಳಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ರೂಹಿ ಸಿಂಗ್, ಈ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಮಾಧ್ಯಮಗಳಲ್ಲಿ ರೂಹಿ ಸಿಂಗ್ ಎಂದು ತೋರಿಸಲಾಗುತ್ತಿರುವ ಆ ಮಹಿಳೆ ನಾನಲ್ಲ. ಆ ಮಹಿಳೆ ನನ್ನ ಹೆಸರನ್ನು ಬಳಸಿಕೊಂಡಿದ್ದರಿಂದ ಈ ಗೊಂದಲ ಉಂಟಾಗಿದೆ. ಹಾಗಾಗಿ ಯಾರು ಸುಳ್ಳು ಸುದ್ದಿಗಳತ್ತ ಗಮನ ಕೊಡಬೇಡಿ ಎಂದು ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ.

https://www.youtube.com/watch?v=ksupG4Urfug

Share This Article
Leave a Comment

Leave a Reply

Your email address will not be published. Required fields are marked *