ವೈರಲ್ ಆಯ್ತು ಶಾರೂಖ್ ನ್ಯೂಲುಕ್ – ರಿಯಲ್ ಫೋಟೋ ರಿಲೀಸ್!

Public TV
1 Min Read

ಮುಂಬೈ: ಇತ್ತೀಚೆಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಆದರೆ ಈಗ ನಿಜವಾದ ಫೋಟೋವನ್ನು ಶೇರ್ ಮಾಡಲಾಗಿದೆ.

ಈ ಫೋಟೋದಲ್ಲಿ ಶಾರೂಖ್ ಉದ್ದನೆಯ ಕೂದಲು ಮತ್ತು ಗಡ್ಡವನ್ನು ಬಿಟ್ಟುಕೊಂಡು ಕಪ್ಪು ಟುಕ್ಸೆಡೊ ಧರಿಸಿರುವುದನ್ನು ಕಾಣಬಹುದು. SRK(ಶಾರೂಖ್) ಹಲವು ಫ್ಯಾನ್ ಕ್ಲಬ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಇದನ್ನೂ ಓದಿ: ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ

 

View this post on Instagram

 

A post shared by Dabboo Ratnani (@dabbooratnani)

ಈ ಫೋಟೋಗೆ, ‘ಬಾದಷ್ ನ್ಯೂ ಲುಕ್’ ಎಂದು ಬರೆದು ಪೋಸ್ಟ್ ಮಾಡಲಾಗಿತ್ತು. ಈ ಫೋಟೋ ನೋಡಿದ ಅಭಿಮಾನಿಗಳು ಶಾರೂಖ್ ಹೊಸ ಲುಕ್ ನೋಡಿ ಫಿದಾ ಆಗಿದ್ದರು. ‘ಶಾರೂಖ್ ಯಾವಾಗಲೂ ಯಂಗ್’ ಎಂದು ಅಭಿಮಾನಿಗಳು ಕಮೆಂಟ್ ಮಾಡಿ ಫೋಟೋವನ್ನ ಲೈಕ್ ಮಾಡಿದ್ದಾರೆ.

ಈ ಫೋಟೋ ವೈರಲ್ ಆದ ನಂತರ ಏಸ್ ಸೆಲೆಬ್ರಿಟಿ ಫೋಟೋಗ್ರಾಫರ್ ‘ಡಬ್ಬೂ ರತ್ನಾನಿ’ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ SRK ನಿಜವಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಡಬ್ಬೂ ರತ್ನಾನಿ ಈ ಪೋಸ್ಟ್ ಗೆ, ಹಳೆಯ ಫೋಟೋದಲ್ಲಿ ನೀವೇ ಇದ್ದರೂ, ಮೂಲವು ಪ್ರತಿಗಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಶಾರೂಖ್ ಅವರಿಗೆ ಯಾವುದೇ ಗಡ್ಡವಿಲ್ಲ. ಸ್ಮಾರ್ಟ್ ಅಂಡ್ ಸ್ಟೈಲ್ ಆಗಿ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಕೊನೆಗೂ ತನ್ನ ಕನಸು ನೆರವೇರಿತು ಎಂದ ಪ್ರಭಾಸ್ !

Share This Article
Leave a Comment

Leave a Reply

Your email address will not be published. Required fields are marked *