ಟನಲ್ ರಸ್ತೆ ಯೋಜನೆ ಬೆಂಗಳೂರಿಗೆ ಪರಿಹಾರವಲ್ಲ: ಅಶ್ವಿನಿ ವೈಷ್ಣವ್

Public TV
1 Min Read

ಬೆಂಗೂರು: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಕನಸಿನ ಸುರಂಗ ರಸ್ತೆ(Tunnel Road) ಯೋಜನೆಗೆ ಕೇಂದ್ರ ಸರ್ಕಾರ ಕೊಕ್ಕೆ ಹಾಕಿದಂತೆ ಕಾಣುತ್ತಿದೆ.

ಟನೆಲ್ ರಸ್ತೆಗಳು ಎಲ್ಲೂ ಸಂಚಾರ ದಟ್ಟಣೆಗೆ ಪರಿಹಾರ ಅಲ್ಲ ಎಂದು ನಗರ ತಜ್ಞರೇ ಎಲ್ಲ ಕಡೆ ಹೇಳಿದ್ದಾರೆ. ಇದು ಇದು ಬೆಂಗಳೂರಿಗೂ (Bengaluru) ಅನ್ವಯವಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆರಂಭವಾಗಲಿದೆ ಮೊಬೈಲ್ ತಯಾರಿಕಾ ಘಟಕ, ಸಿಗಲಿದೆ 50 ಸಾವಿರ ಜನರಿಗೆ ಉದ್ಯೋಗ: ಅಶ್ವಿನಿ ವೈಷ್ಣವ್‌

 

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟ್ರಾಫಿಕ್ ಸಮಸ್ಯೆಗೆ (Traffic Problem) ಟನಲ್‌ ರಸ್ತೆ ಪರಿಹಾರವಲ್ಲ.ರೈಲ್ವೇ ಆಧಾರಿತ ಯೋಜನಗಳೇ ಇದಕ್ಕೆ ಪರಿಹಾರ ಎಂದಿದ್ದಾರೆ.

ಬೆಂಗಳೂರಿಗೆ ಸರ್ಕ್ಯೂಲರ್‌ ರೈಲು ಯೋಜನೆಯನ್ನು ತರಲಿದ್ದು ಸದ್ಯವೇ ಸಮಗ್ರ ಯೋಜನಾ ವರದಿ (DPR) ಮಾಡುತ್ತೇವೆ. ಏಳು ದಿಕ್ಕುಗಳಿಂದಲೂ ರೈಲು ಮಾರ್ಗಗಳ ಸಂಪರ್ಕವವನ್ನು ಬೆಂಗಳೂರಿಗೆ ನೀಡುತ್ತೇವೆ ಎಂದು ವೈಷ್ಣವ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಅಶ್ವಿನಿ ವೈಷ್ಣವ್‌

ಈ ಸಂದರ್ಭದಲ್ಲೇ ಸಬ್‌ ಅರ್ಬನ್ ರೈಲು ಯೋಜನೆಗೆ ರಾಜ್ಯದ ಸ್ಪಂದನೆ ತೃಪ್ತಿದಾಯಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Share This Article