ಸುರಂಗದಲ್ಲಿ ಸಿಲುಕಿದ ಕಾರ್ಮಿಕರು – 7 ಮಂದಿಯ ರಕ್ಷಣೆ

Public TV
1 Min Read

ಭೋಪಾಲ್: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸ್ಲೀಮನಾಬಾದ್‍ನಲ್ಲಿ ಕಾಮಗಾರಿ ವೇಳೆ ಬಾರ್ಗಿ ಕಾಲುವೆ ಸುರಂಗ ಮೇಲ್ಭಾಗ ಕುಸಿದು 9 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಅವರಲ್ಲಿ ಈಗಾಗಲೇ 7 ಮಂದಿಯನ್ನು ರಕ್ಷಿಸಿದ್ದು, ಇನ್ನೂ ಇಬ್ಬರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ.

ಶನಿವಾರ ತಡರಾತ್ರಿ ನಿರ್ಮಾಣ ಹಂತದಲ್ಲಿರುವ ಬಾರ್ಗಿ ಕಾಲುವೆ ಸುರಂಗದ ಮೇಲ್ಭಾಗ ಕುಸಿದಿದೆ. ಇದರಲ್ಲಿ 9 ಕಾರ್ಮಿಕರು ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿರನ್ನು ರಕ್ಷಿಸಲು ಸ್ಥಳೀಯ ಅಧಿಕಾರಿಗಳು ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ ತಂಡ(ಎಸ್‍ಡಿಇಆರ್‍ಎಫ್)ದ ಸಹಾಯ ಪಡೆದು ಕಾರ್ಮಿಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಎಸ್‍ಡಿಇಆರ್‍ಎಫ್ ತಂಡ ಜಬಲ್‍ಪುರದಿಂದ ಆಗಮಿಸಿದೆ ಎಂದು ಕಟ್ನಿ ಕಲೆಕ್ಟರ್ ಪ್ರಿಯಾಂಕ್ ಮಿಶ್ರಾ ತಿಳಿಸಿದರು.

ಸಿಕ್ಕಿಬಿದ್ದ ಕಾರ್ಮಿಕರು ರಕ್ಷಣಾ ಸಿಬ್ಬಂದಿಯ ಕರೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದರಿಂದಾಗಿ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ ಎಂದು ಸ್ಲೀಮನಾಬಾದ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸಂಘ ಮಿತ್ರ ಗೌತಮ್ ಹೇಳಿದರು. ಇದನ್ನೂ ಓದಿ: ನಿರುದ್ಯೋಗ ಹೆಚ್ಚಾಗಲು ಕಾರಣ ಕೇಂದ್ರ ಸರ್ಕಾರ: ರಾಹುಲ್ ಗಾಂಧಿ

ಅಗತ್ಯ ಸಾಧನಗಳೊಂದಿಗೆ ಎಸ್‍ಡಿಇಆರ್‌ಎಫ್ ತಂಡವು ಸುರಂಗವನ್ನು ಅಗೆಯುವ ಮೂಲಕ ಕಾರ್ಮಿಕರನ್ನು ತಲುಪಲು ಪ್ರಯತ್ನಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ರಾಜೋರಾ ತಿಳಿಸಿದರು.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಸ್ಲೀಮನಾಬಾದ್‍ನಲ್ಲಿ ನಡೆದ ಘಟನೆಯ ಕಟ್ನಿ ಕಲೆಕ್ಟರ್‌ರೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

Share This Article
Leave a Comment

Leave a Reply

Your email address will not be published. Required fields are marked *