ನಟಿ ತುನಿಷಾ ಶರ್ಮಾ ಸಾವು ಪ್ರಕರಣ – ಆರೋಪಿ ಶಿಜಾನ್‌ ಖಾನ್‌ ಬೆಂಬಲಕ್ಕೆ ನಿಂತ ಊರ್ಫಿ

Public TV
1 Min Read

ಕಿರುತೆರೆ ನಟಿ ತುನಿಷಾ ಶರ್ಮಾ (Tunisha Sharma) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತುನಿಷಾ ಸಾವಿಗೆ ಲವ್‌ ಜಿಹಾದ್‌ ಕಾರಣ ಎಂದು ನಟಿಯ ಕುಟುಂಬಸ್ಥರು ಸಹನಟ ಶಿಜಾನ್‌ ಖಾನ್‌ (Sheezan Khan) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದರ ಮಧ್ಯೆ, ಪ್ರಕರಣದ ಆರೋಪಿ ಶಿಜಾನ್‌ ಬೆಂಬಲಕ್ಕೆ ನಿಂತು ಬಿಗ್‌ ಬಾಸ್‌ ಒಟಿಟಿ ಖ್ಯಾತಿಯ ನಟಿ ಊರ್ಫಿ ಜಾವೇದ್‌ (Uorfi Javed) ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ತುನಿಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಊರ್ಫಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. “ತುನಿಷಾ ಪ್ರಕರಣದಲ್ಲಿ ನನ್ನ 2 ಅಭಿಪ್ರಾಯಗಳಿವೆ. ಹೌದು.. ಅವನಿಂದ ತಪ್ಪಾಗಿರಬಹುದು. ಅವನು ಅವಳಿಗೆ ಮೋಸ ಮಾಡಿರಬಹುದು. ಆದರೆ ಅವಳ ಸಾವಿಗೆ ನಾವು ಅವನನ್ನು ದೂಷಿಸಲು ಸಾಧ್ಯವಿಲ್ಲ. ಉಳಿಯಲು ಇಷ್ಟಪಡದ ಯಾರನ್ನೂ ನಿಮ್ಮೊಂದಿಗೆ ಇರುವಂತೆ ಮಾಡಲು ಸಾಧ್ಯವೇ ಇಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಜಮಾಲಿಗುಡ್ಡದ ಕಥೆ ಹೇಳಲು ಡಾಲಿ, ಅದಿತಿ ರೆಡಿ

“ಕೆಲವೊಮ್ಮೆ ಇದು ಪ್ರಪಂಚದ ಅಂತ್ಯದಂತೆ ತೋರುತ್ತದೆ. ಹಾಗಂತ ಅಮೂಲ್ಯವಾದ ಜೀವವನ್ನು ತ್ಯಜಿಸುವುದು ಸರಿಯಲ್ಲ. ನಿಮ್ಮನ್ನು ಪ್ರೀತಿಸುವ ಜನರ ಬಗ್ಗೆ ಯೋಚಿಸಿ. ನಿಮ್ಮನ್ನು ನೀವೇ ಪ್ರೀತಿಸಲು ಸ್ವಲ್ಪ ಕಷ್ಟಪಟ್ಟು ಪ್ರಯತ್ನಿಸಿ. ನಿಮಗೆ ನೀವೇ ನಾಯಕರಾಗಿ. ದಯವಿಟ್ಟು ಸ್ವಲ್ಪ ಸಮಯ ಕೊಡಿ. ಆತ್ಮಹತ್ಯೆಯ ನಂತರ ಸಂಕಟ ಕೊನೆಗೊಳ್ಳುವುದಿಲ್ಲ. ಇದರಿಂದ ಉಳಿದವರು ಇನ್ನಷ್ಟು ಬಳಲುತ್ತಿದ್ದಾರೆ” ಎಂದು ನಟಿ ಪೋಸ್ಟ್‌ ಮಾಡಿದ್ದಾರೆ.

ನಟಿ ತುನಿಷಾ ಶರ್ಮಾ ಇದೇ ಡಿ.24 ರಂದು ಸಿನಿಮಾ ಶೂಟಿಂಗ್‌ ವೇಳೆ ಸೆಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಶಿಜಾನ್‌ ಖಾನ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ತಮಿಳು ನಿರ್ದೇಶಕನ ಜೊತೆ ಸದ್ದಿಲ್ಲದೇ ಮದುವೆಯಾದ ಕನ್ನಡದ ನಟಿ ಧನ್ಯಾ ಬಾಲಕೃಷ್ಣ

ಶ್ರದ್ಧಾ ವಾಕರ್‌ (Shraddha Walkar) ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದರಿಂದ ನಮಗೂ ತೊಂದರೆಯಾಗಬಹುದು ಎಂಬ ಕಾರಣಕ್ಕೆ ತುನಿಷಾಳಿಂದ ನಾನು ದೂರವಾದೆ ಎಂದು ಶಿಜಾನ್‌ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *