ಒಟಿಟಿಯಲ್ಲಿ ‘ತುಂಗಾ ಹಾಸ್ಟೆಲ್ ಬಾಯ್ಸ್’ ಹಾವಳಿ ಶುರು

Public TV
2 Min Read

ಹೊಸ ಪ್ರತಿಭೆಗಳ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾ ಥಿಯೇಟರ್ ನಲ್ಲಿ ಕಮಾಲ್ ಮಾಡಿತ್ತು. ಕಳೆದ ಜುಲೈ 21ರಂದು ಬಿಡುಗಡೆಯಾಗಿದ್ದ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿತ್ತು.  ನಕ್ಕು ನಲಿಸಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಒಟಿಟಿಯಲ್ಲಿ ಹವಾಳಿ ಶುರು ಮಾಡಿಕೊಂಡಿದ್ದಾರೆ. ಅಂದರೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜೀ5 ಒಟಿಟಿಗೆ (OTT) ಎಂಟ್ರಿ ಕೊಟ್ಟಿದೆ.

ನಿತಿನ್ ಕೃಷ್ಣಮೂರ್ತಿ (Nitin Krishna) ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಇಡೀ ಸ್ಯಾಂಡಲ್ ವುಡ್ ಸಪೋರ್ಟ್ ಕೊಟ್ಟಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಗೆ ಚಾಲನೆ ನೀಡಿದ್ದರು. ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ಪವನ್ ಕುಮಾರ್ ಹಾಗೂ ರಮ್ಯಾ ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದರು. ಇಡೀ ಚಿತ್ರರಂಗ ಬೆಂಬಲ ಕೊಟ್ಟಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಬೆಳ್ಳಿತೆರೆಯಲ್ಲಿ ಧಮಾಕ ಎಬ್ಬಿಸಿದ್ದರು. ಸಿನಿರಸಿಕರನ್ನು ಸಿನಿಮಾ ಥಿಯೇಟರ್ ನತ್ತ ಮುಖ ಮಾಡುವಂತೆ ಮಾಡಿ ಚಪ್ಪಾಳೆ ಪಡೆದಿದ್ದ ಈ ಸಿನಿಮಾ ತೆಲುಗು, ಹೊರ ದೇಶದಲ್ಲಿಯೂ ಭಾರೀ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದನ್ನೂ ಓದಿ:ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ರಾ ಸೋನು ಗೌಡ

ವರುಣ್ ಗೌಡ, ನಿತಿನ್ ಕೃಷ್ಣಮೂರ್ತಿ, ಪ್ರಜ್ವಲ್ ಬಿ.ಪಿ, ಅರವಿಂದ್ ಎಸ್ ಕಶ್ಯಪ್ ಸಿನಿಮಾಗೆ ಬಂಡವಾಳ ಹೂಡಿದ್ದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಥಿಯೇಟರ್ ಅಂಗಳದಲ್ಲಿ ಮನರಂಜನೆ ರಸದೌತಣ ನೀಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಕಿರುಚಿತ್ರ ನಿರ್ದೇಶಿಸಲು ವಾರ್ಡನ್ ಸಪೋರ್ಟ್ ಕೊಟ್ಟಿದ್ದರು. ಸಿನಿಮಾ ಒಳಗೊಂದು ಕಿರುಚಿತ್ರ ಕಥೆ ಹೆಣೆಯಲಾಗಿತ್ತು. ಇದೀಗ ಜೀ5 ಅತ್ಯುತ್ತಮ ಕಿರುಚಿತ್ರ ನಿರ್ದೇಶಿಸಿದರಿಗೆ ಆಫರ್ ವೊಂದನ್ನು ಕೊಟ್ಟಿದೆ. ಶಾರ್ಟ್ ಫಿಲ್ಮಂ ಕಂಟೆಸ್ಟ್ ಚಾನ್ಸ್ ನೀಡಿದ್ದು, ಇದರಲ್ಲಿ ಅತ್ಯುತ್ತಮ ಎನಿಸಿದ್ದನ್ನು ಜೀ5 ಒಟಿಟಿಯಲ್ಲಿ ಪ್ರಸಾರ ಮಾಡಲಾಗುತ್ತದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್