ತುಮಕೂರಲ್ಲಿ ಭೀಕರ ಅಪಘಾತ – ಮಹಿಳೆ ತಲೆ ಮೇಲೆ ಹರಿದ ಬಸ್

Public TV
1 Min Read

ತುಮಕೂರು: ಬೈಕ್ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ನಗರದ ಶಿರಾ ಗೇಟ್ ಬಳಿ ನಡೆದಿದೆ.

ಈ ಘಟನೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಮಹಿಳೆಯನ್ನು 55 ವರ್ಷದ ತುರುವೇಕೆರೆ ಮೂಲದ ಕಲ್ಲಳ್ಳಿ ನಿವಾಸಿ ಶಿವಮ್ಮ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಬೈಕ್ ಸವಾರ ಶ್ರೀನಿವಾಸ್ (35) ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ತುಮಕೂರಿನ ಶ್ರೀದೇವಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸ್‍ಗೆ ಸೈಡ್ ಕೊಡಲು ಹೋದ ಸಮಯದಲ್ಲಿ ಆಯತಪ್ಪಿ ಬೈಕ್ ಸಮೇತ ರೋಡ್‍ಗೆ ಬಿದ್ದವರ ಮೇಲೆ ಬಸ್ ಚಕ್ರ ಹರಿದಿದೆ. ಈ ವೇಳೆ ಹಿಂಬದಿಗೆ ಬಿದ್ದ ಮಹಿಳೆಯ ತಲೆ ಮೇಲೆ ಬಸ್ ಚಕ್ರ ಹರಿದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *