ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ- ಸುನಾಮಿ ಎಚ್ಚರಿಕೆ!

Public TV
1 Min Read

ಜಕಾರ್ತ: ಇಂಡೋನೇಷ್ಯಾದಲ್ಲಿ ಮಂಗಳವಾರ ಬೆಳಗ್ಗೆ 7.6 ತೀವ್ರತೆಯ ಭೂಕಂಪನ ಸಂಭವಿಸಿದೆ. ಇದರೊಂದಿಗೆ ಯುನೈಟೆಡ್ ಸ್ಟೇಟ್ ಜಿಯೋಲಾಜಿಕಲ್ ಸರ್ವೆ(ಯುಎಸ್‌ಜಿಎಸ್) ಇಂಡೋನೇಷ್ಯಾದ ಹವಾಮಾನ ಇಲಾಖೆಗೆ ಸುನಾಮಿಯ ಎಚ್ಚರ ನೀಡಿದೆ.

ಇನ್ನೊಂದೆಡೆ ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರವು 7.7 ತೀವ್ರತೆಯ ಭೂಕಂಪನವನ್ನು ಅಂದಾಜಿಸಿದ್ದು, ಸುಮಾರು 5 ಕಿಮೀ ಆಳದಲ್ಲಿ ಇದರ ಕೇಂದ್ರವನ್ನು ಗುರುತಿಸಿದೆ. ಈ ಭೂಕಂಪ ಫ್ಲೋರ್ಸ್ ಸಮುದ್ರದ ಪೂರ್ವ ನುಸಾ ಟೆಂಗರಾ ಪ್ರದೇಶದಲ್ಲಿ ನಡೆದಿದೆ.

ಅಮೇರಿಕಾ ಮೂಲದ ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ಹೇಳಿಕೆಯ ಪ್ರಕಾರ ಇಂಡೋನೇಷ್ಯಾದಲ್ಲಿ ಸಂಭವಿಸಿರುವ ಭೂಕಂಪದ ಪರಿಣಾಮ ಅದರ ಕೇಂದ್ರ ಬಿಂದುವಿನಿಂದ ಹಿಡಿದು 1000 ಕಿಮೀ ವ್ಯಾಪ್ತಿಯ ವರೆಗಿನ ಕರಾವಳಿ ಪ್ರದೇಶಗಳಲ್ಲಿ ಅಪಾಯಕಾರಿ ಸುನಾಮಿ ಏಳುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಎದೆ ಮೇಲೆ ತಲೈವಾ ಭಾವಚಿತ್ರದ ಟ್ಯಾಟು ಹಾಕಿಸಿಕೊಂಡ ಹರ್ಭಜನ್ ಸಿಂಗ್

ಇಂಡೋನೇಷ್ಯಾದ ರಿಂಗ್ ಆಫ್ ಫಯರ್ ಪ್ರದೇಶದಲ್ಲಿ ಆಗಾಗ ಭೂಕಂಪ ಹಾಗೂ ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತಿರುತ್ತವೆ.

2004ರಲ್ಲಿ ಸುಮಾತ್ರಾ ಕರಾವಳಿಪ್ರದೇಶದಲ್ಲಿ 9.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇದರ ಕಾರಣ ಭಯಂಕರ ಸುನಾಮಿಯೂ ಅಪ್ಪಳಿಸಿತ್ತು. ಪರಿಣಾಮ 2.20 ಲಕ್ಷ ಜನರು ಜೀವ ಕಳೆದುಕೊಂಡಿದ್ದರು. ಅದರಲ್ಲಿ 1.70 ಲಕ್ಷ ಜನರು ಇಂಡೋನೇಷ್ಯಾದ ನಿವಾಸಿಗಳೇ ಆಗಿದ್ದರು. ಈ ಘಟನೆ ಇತಿಹಾಸದಲ್ಲಿ ದಾಖಲಾದ ಅತೀ ದೊಡ್ಡ ಮಾರಣಾಂತಿಕ ಪ್ರಾಕೃತಿಕ ವಿಕೋಪಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಇದನ್ನೂ ಓದಿ: ರಹಸ್ಯ ಕೋಣೆಯಲ್ಲಿದ್ದ ಮಹಿಳೆಯರ ರಕ್ಷಣೆ

2018ರಲ್ಲಿ ಇನ್ನೊಂದು ಭಾರೀ ಭೂಕಂಪ ಸಂಭವಿಸಿದ್ದು, ಲಂಬೋಕ್ ದ್ವೀಪವನ್ನು ಬೆಚ್ಚಿ ಬೀಳಿಸಿತ್ತು. ಇದರ ಪರಿಣಾಮ 550ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದರು. ಅದೇ ವರ್ಷದಲ್ಲಿ 7.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದು, ನಂತರ ಸುನಾಮಿಯಲ್ಲಿ ಸುಲಾವೆಸಿ ದ್ವೀಪದ 4 ಸಾವಿರಕ್ಕೂ ಹೆಚ್ಚು ಜನರು ಕಾಣೆಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *