ರಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

Public TV
1 Min Read

– ಕೇವಲ 1 ಗಂಟೆಯಲ್ಲಿ 5 ಬಾರಿ ಪ್ರಬಲ ಭೂಕಂಪ

ಮಾಸ್ಕೋ: ಒಂದು ಗಂಟೆ ಅವಧಿಯಲ್ಲಿ 5 ಪ್ರಬಲ ಭೂಕಂಪಗಳು ಸಂಭವಿಸಿದ ಪರಿಣಾಮ, ಹವಾಯಿಯ (Hawaii) ರಷ್ಯಾಕ್ಕೆ (Russia) ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಯುಎಸ್ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು, ರಷ್ಯಾದ ದೂರದ ಪೂರ್ವದ ಕಮ್ಚಟ್ಕಾದ ಪೂರ್ವ ಕರಾವಳಿಯಲ್ಲಿ ಭಾನುವಾರ ರಷ್ಯಾ ಮತ್ತು ಹವಾಯಿಯ ಕೆಲವು ಭಾಗಗಳಿಗೆ ಸುನಾಮಿ (Tsunami) ಎಚ್ಚರಿಕೆ ನೀಡಿದೆ. ಭೂಕಂಪಗಳು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿವೆ. ಇದನ್ನೂ ಓದಿ: 20 ವರ್ಷ ಕೋಮಾದಲ್ಲಿದ್ದ ಸೌದಿ ರಾಜಕುಮಾರ `ಸ್ಲೀಪಿಂಗ್ ಪ್ರಿನ್ಸ್’ ನಿಧನ

ಜರ್ಮನ್ ಸಂಶೋಧನಾ ಕೇಂದ್ರ ಜಿಯೋ ಸೈನ್ಸಸ್ (ಜಿಎಫ್‌ Z ಡ್) 6.7 ತೀವ್ರತೆಯಲ್ಲಿ ಭೂಕಂಪವಾಗಿದೆ ಎಂದು ವರದಿ ಮಾಡಿತ್ತು. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್ಸಿ) ಮತ್ತು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) 7.4 ತೀವ್ರತೆಯಲ್ಲಿ ಭೂಕಂಪವಾಗಿದೆ ಎಂದು ವರದಿ ಮಾಡಿವೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಈ ಪ್ರದೇಶದಲ್ಲಿ ಒಟ್ಟು ಐದು ಭೂಕಂಪಗಳು ಸಂಭವಿಸಿವೆ. ಎಲ್ಲವೂ ಸುಮಾರು 10 ಕಿಲೋಮೀಟರ್ ಆಳದಲ್ಲಿವೆ. ಇದನ್ನೂ ಓದಿ: ವಿಯೆಟ್ನಾಂನಲ್ಲಿ ಪ್ರವಾಸಿ ದೋಣಿ ಮಗುಚಿ 34 ಮಂದಿ ಸಾವು – ಹಲವರು ಮಿಸ್ಸಿಂಗ್‌

ಎಲ್ಲೆಲ್ಲೆ ಎಷ್ಟು ತೀವ್ರತೆಯಲ್ಲಿ ಭೂಕಂಪ?
ಮ್ಯಾಗ್ನಿಟ್ಯೂಡ್ 6.6 (ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ 147 ಕಿಮೀ ಇ, ರಷ್ಯಾ)
ಮ್ಯಾಗ್ನಿಟ್ಯೂಡ್ 6.7 (ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ 151 ಕಿಮೀ ಇ, ರಷ್ಯಾ)
ಮ್ಯಾಗ್ನಿಟ್ಯೂಡ್ 7.4 (ಪೆಟ್ರೋಪಾವ್ಲೋವ್ಸ್ಕ್-ಕಾಮ್‌ಚಾಟ್ಸ್ಕಿಯ 144 ಕಿಮೀ ಇ, ರಷ್ಯಾ)
ಮ್ಯಾಗ್ನಿಟ್ಯೂಡ್ 6.7 (ಪೆಟ್ರೋಪಾವ್ಲೋವ್ಸ್ಕ್-ಕಾಮ್‌ಚಾಟ್ಸ್ಕಿಯ 130 ಕಿಮೀ ಇ, ರಷ್ಯಾ)
ಮ್ಯಾಗ್ನಿಟ್ಯೂಡ್ 7 (ಪೆಟ್ರೋಪಾವ್ಲೋವ್ಸ್ಕ್-ಕಾಮ್‌ಚಾಟ್ಸ್ಕಿಯ 142 ಕಿಮೀ ಇ, ರಷ್ಯಾ)

ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಭೂಕಂಪಗಳಿಂದ ಗಮನಾರ್ಹ ಹಾನಿ ಅಥವಾ ಸಾವುನೋವುಗಳ ಬಗ್ಗೆ ಈವರೆಗೆ ಯಾವುದೇ ವರದಿಗಳು ಬಂದಿಲ್ಲ.

Share This Article