ಟೀ ಟೈಮ್ನಲ್ಲಿ ಹೆಚ್ಚಿನವರಿಗೆ ಏನಾದರೂ ಚಾಟ್ ಸವಿಯಬೇಕು ಎನಿಸುತ್ತದೆ. ಅಂತಹವರಿಗೆ ನಾವಿಂದು ಒಂದು ಹೊಸ ರೆಸಿಪಿಯನ್ನು ಹೇಳಿಕೊಡುತ್ತೇವೆ. ಹುಳಿ, ಸಿಹಿ ಖಾರ ರುಚಿಯುಳ್ಳ ಬೇಯಿಸಿದ ಕಡಲೆಕಾಯಿಯ ಚಾಟ್ (Peanut Chaat) ಅನ್ನು ನೀವು ಕೂಡಾ ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
ಬೇಯಿಸಲು:
ಕಡಲೆಕಾಯಿ – 1 ಕಪ್
ಅರಿಶಿನ – ಅರ್ಧ ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ನೀರು – 2 ಕಪ್
ಇತರ ಪದಾರ್ಥಗಳು:
ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
ಚಾಟ್ ಮಸಾಲ – ಅರ್ಧ ಟೀಸ್ಪೂನ್
ಹಸಿರು ಚಟ್ನಿ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
ಸಣ್ಣಗೆ ಹೆಚ್ಚಿದ ಟೊಮೆಟೊ – 2
ಬೇಯಿಸಿದ ಸ್ವೀಟ್ ಕಾರ್ನ್ – 2 ಟೀಸ್ಪೂನ್
ತುರಿದ ಮಾವಿನಕಾಯಿ – 1 ಟೀಸ್ಪೂನ್
ದಾಳಿಂಬೆ – 2 ಟೀಸ್ಪೂನ್
ಬೇಯಿಸಿದ ಆಲೂಗಡ್ಡೆ – ಅರ್ಧ
ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪು – 2 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್ ಇದನ್ನೂ ಓದಿ: ಮೊಳಕೆಯೊಡೆದ ಹೆಸರುಕಾಳಿನಿಂದ ಮಾಡಿ ಆರೋಗ್ಯಕರ ಕೋಸಂಬರಿ
ಮಾಡುವ ವಿಧಾನ:
* ಮೊದಲಿಗೆ ಪ್ರೆಶರ್ ಕುಕ್ಕರ್ನಲ್ಲಿ ಕಡಲೆಕಾಯಿ, ಅರಿಶಿನ ಹಾಗೂ ಉಪ್ಪು ಹಾಕಿ 2 ಕಪ್ ನೀರು ಸೇರಿಸಿ 3 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಜಾಗ್ರತೆಯಿಂದ ಕಡಲೆಕಾಯಿಯನ್ನು ತೆಗೆದು, ನೀರನ್ನು ಹರಿಸಿ.
* ಬಳಿಕ ಒಂದು ದೊಡ್ಡ ಬಟ್ಟಲು ತೆಗೆದುಕೊಂಡು, ಅದರಲ್ಲಿ ಕಡಲೆಕಾಯಿ, ಮೆಣಸಿನ ಪುಡಿ, ಚಾಟ್ ಮಸಾಲ ಮತ್ತು ಹಸಿರು ಚಟ್ನಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈರುಳ್ಳಿ, ಟೊಮೆಟೊ, ಸ್ವೀಟ್ ಕಾರ್ನ್, ತುರಿದ ಮಾವಿನಕಾಯಿ, ದಾಳಿಂಬೆ, ಹಾಗೂ ಆಲೂಗಡ್ಡೆ ಸೇರಿಸಿ.
* ಬಳಿಕ ಕೊತ್ತಂಬರಿಸೊಪ್ಪು, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ಕಡಲೆಕಾಯಿಯ ಚಾಟ್ ಸಿದ್ಧವಾಗಿದ್ದು, ಸಂಜೆ ವೇಳೆ ಚಹಾದೊಂದಿಗೆ ಸವಿಯಿರಿ. ಇದನ್ನೂ ಓದಿ: ವಾವ್, ಸಖತ್ ಟೇಸ್ಟಿ – ಬೇಬಿ ಕಾರ್ನ್ ರೋಸ್ಟ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k