ಜೈಪುರದ ವಿಶಿಷ್ಟ ಉಪಹಾರ – ಮಿರ್ಚಿ ವಡಾ ಟ್ರೈ ಮಾಡಿ

Public TV
2 Min Read

ಜೈಪುರದ ವಿಶಿಷ್ಟ ಉಪಹಾರ ಮಿರ್ಚಿ ವಡಾವನ್ನು ಮುಖ್ಯವಾಗಿ ಭಾವನಾಗ್ರಿ ಮೆಣಸಿನಿಂದ ತಯಾರಿಸಲಾಗುತ್ತದೆ. ಜೈಪುರದ ಪ್ರತಿ ಮೂಲೆಗಳಲ್ಲೂ ಮಿರ್ಚಿ ವಡಾ ಮಾರಾಟ ಮಾಡೋ ಸ್ಟಾಲ್‌ಗಳು ಕಂಡುಬರುತ್ತವೆ. ಆದರೆ ಹೆಸರು ಹೇಳುವಂತೆ ಈ ಮಿರ್ಚಿ ವಡಾ ಹೆಚ್ಚು ಖಾರದ ಖಾದ್ಯವಲ್ಲ. ವಿಭಿನ್ನ ರುಚಿಯ ಈ ತಿನಿಸು ಎಲ್ಲರಿಗೂ ಇಷ್ಟವಾಗುತ್ತದೆ. ಹಾಗಿದ್ರೆ ತಡ ಮಾಡದೇ ಈ ಮಿರ್ಚಿ ವಡಾ ಮಾಡೋದು ಹೇಗೆಂದು ನೋಡೋಣ.

ಬೇಕಾಗುವ ಪದಾರ್ಥಗಳು:
ಭಾವನಾಗ್ರಿ ಮೆಣಸು – 250 ಗ್ರಾಂ
ಬೇಯಿಸಿದ ಆಲೂಗಡ್ಡೆ – 4
ಜೀರಿಗೆ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಹಿಂಗ್ – 1 ಚಿಟಿಕೆ
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಒಣ ಮಾವಿನ ಪುಡಿ – 1 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
ಕಡಲೆ ಹಿಟ್ಟು – 125 ಗ್ರಾಂ
ಅಜ್ವೈನ್ – 1 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಟೇಸ್ಟಿ ಚಾಟ್‌ಗೆ ಬಳಸೋ ಗ್ರೀನ್ ಚಟ್ನಿ ಮಾಡೋದು ಹೇಗೆ?

ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟು, ಅಜ್ವೈನ್ ಕಾಳು, ಉಪ್ಪು ಮತ್ತು ಕೆಂಪು ಮೆಣಸಿನ ಪುಡಿ ಹಾಕಿ. ನಿಧಾನವಾಗಿ ನೀರು ಸೇರಿಸಿ ಮತ್ತು ದಪ್ಪ ಪೇಸ್ಟ್‌ನಂತೆ ಕಲಸಿಕೊಳ್ಳಿ.
* ಹಿಟ್ಟಿನಲ್ಲಿ ಯಾವುದೇ ಉಂಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ ಅದನ್ನು ಪಕ್ಕಕ್ಕೆ ಇರಿಸಿ.
* ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ಮ್ಯಾಶ್ ಮಾಡಿ.
* ಅದಕ್ಕೆ ಉಪ್ಪು, ಅರಿಶಿನ ಪುಡಿ, ಜೀರಿಗೆ, ಒಣ ಮಾವಿನ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಮೆಣಸುಗಳನ್ನು ತೊಳೆದು ದಪ್ಪ ಹತ್ತಿಯ ಬಟ್ಟೆಯಿಂದ ಒರೆಸಿಕೊಳ್ಳಿ. ಮೆಣಸು ತೇವವಾಗಿರಬಾರದು.
* ಒಂದು ಚಾಕುವಿನ ಸಹಾಯದಿಂದ ಮೆಣಸಿನಕಾಯಿಯ ಒಂದು ಭಾಗದಲ್ಲಿ ಉದ್ದಕ್ಕೆ ಸೀಳಿ. ಅದರ ಒಳಗಿನ ಬೀಜಗಳನ್ನು ಹೊರಗೆ ತೆಗೆಯಿರಿ.
* ಈಗ ಆಲೂಗಡ್ಡೆ ಮಿಶ್ರಣವನ್ನು ಮೆಣಸಿನಕಾಯಿಯ ಒಳಗೆ ಚೆನ್ನಾಗಿ ತುಂಬಿಸಿಕೊಳ್ಳಿ. ಎಲ್ಲಾ ಮೆಣಸಿನಕಾಯಿಗಳನ್ನೂ ಹೀಗೆ ತಯಾರಿಸಿ ಇಡಿ.
* ಈಗ ಬಾಣಲೆಯಲ್ಲಿ ಮೆಣಸಿನಕಾಯಿಗಳನ್ನು ಹುರಿಯಲು ಎಣ್ಣೆ ಬಿಸಿ ಮಾಡಿ.
* ಮೆಣಸಿನಕಾಯಿಗಳನ್ನು ಕಡಲೆ ಹಿಟ್ಟಿನ ಬ್ಯಾಟರ್‌ನಲ್ಲಿ ಅದ್ದಿ, ನಂತರ ಅದನ್ನು ಕಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ.
* ಮಿರ್ಚಿ ವಡಾ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹಾಗೂ ಗರಿಗರಿಯಾಗುವವರೆಗೆ ಫ್ರೈ ಮಾಡಿ.
* ನಂತರ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ಮಿರ್ಚಿ ವಡಾ ತಯಾರಾಗಿದ್ದು, ಚಟ್ನಿಯೊಂದಿಗೆ ಬಡಿಸಿ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್