ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು – 205 ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಒಂದೇ ಟಾಯ್ಲೆಟ್‌

Public TV
1 Min Read

ವಾಷಿಂಗ್ಟನ್: ಅಕ್ರಮವಾಗಿ ಅಮೆರಿಕ (America) ಪ್ರವೇಶಿಸಿದ್ದ 205 ಭಾರತೀಯರನ್ನು (Indians) ಗಡಿಪಾರು ಮಾಡಲಾಗಿದೆ. ಎಲ್ಲರನ್ನೂ ಅಮೆರಿಕ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ವಾಪಸ್‌ ಕರೆತರಲಾಗುತ್ತಿದೆ.

ಅಮೆರಿಕದ ಟೆಕ್ಸಾಸ್‌ನಿಂದ ವಿಮಾನ ಹೊರಟಿದೆ. ಗಡಿಪಾರು ಮಾಡಲಾದ ಎಲ್ಲಾ ಭಾರತೀಯ ಪ್ರಜೆಗಳನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದಲ್ಲಿರುವ ಅಕ್ರಮ ಭಾರತೀಯ ವಲಸಿಗರನ್ನು ಮರಳಿ ಕರೆತರುವ ಇಂತಹ ಅನೇಕ ವಿಮಾನಗಳಿದ್ದು, ಇದು ಮೊದಲನೆಯದಾಗಿದೆ. ಇದನ್ನೂ ಓದಿ: ಅಕ್ರಮವಾಗಿ ಸೆಕ್ಸ್‌ ಮೂವಿ ಶೂಟಿಂಗ್‌ – ಬಾಂಗ್ಲಾ ಮಹಿಳೆ ಸೇರಿ ಮೂವರು ಅರೆಸ್ಟ್‌

ಅಮೆರಿಕದ ಸಿ-17 ಮಿಲಿಟರಿ ವಿಮಾನವು ಭಾರತೀಯ ಪ್ರಜೆಗಳನ್ನು ಮನೆಗೆ ಮರಳಿ ಕರೆತರುತ್ತಿದೆ. ಯುಎಸ್ ವಾಯುಪಡೆಯ ಸಿ-17 ವಿಮಾನವು 205 ಪ್ರಯಾಣಿಕರಿಗೆ ಒಂದೇ ಒಂದು ಶೌಚಾಲಯವನ್ನು ಹೊಂದಿದೆ.

ಅಕ್ರಮ ವಲಸಿಗರ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಠಿಣ ನಿಲುವು ಕೈಗೊಂಡಿದ್ದಾರೆ. ಅದಕ್ಕೆ ಅನುಗುಣವಾಗಿ ವಲಸಿಗರನ್ನು ಗಡಿಪಾರು ಮಾಡಲಾಗುತ್ತಿದೆ. ಇದನ್ನೂ ಓದಿ: ಚೀನಾ, ಮೆಕ್ಸಿಕೊ, ಕೆನಡಾಗೆ ಸುಂಕದ ಬರೆ – ಅಮೆರಿಕಕ್ಕೆ ಬೀಳುತ್ತಾ ರಿವರ್ಸ್‌ ಟ್ಯಾಕ್ಸ್‌ ಎಫೆಕ್ಟ್‌?

ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಅಮೆರಿಕಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ವರದಿಗಳ ಮಧ್ಯೆಯೇ ಅಕ್ರಮ ಭಾರತೀಯ ಪ್ರಜೆಗಳ ಗಡಿಪಾರು ಪ್ರಕ್ರಿಯೆ ಮೊದಲ ಹಂತದಲ್ಲಿ ಆರಂಭವಾಗಿದೆ.

ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಮೋದಿ ಅವರ ಮೊದಲ ಭೇಟಿಯಾಗಿದೆ. ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ‘ಕಾನೂನುಬಾಹಿರವಾಗಿ’ ವಾಸಿಸುವ ಭಾರತೀಯ ಪ್ರಜೆಗಳ ಕಾನೂನುಬದ್ಧ ಮರಳುವಿಕೆಗೆ ನವದೆಹಲಿ ಮುಕ್ತವಾಗಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಈ ಹಿಂದೆ ಸ್ಪಷ್ಟಪಡಿಸಿದ್ದರು.

Share This Article