ವಾಷಿಂಗ್ಟನ್: ಒಂದೇ ವರ್ಷದಲ್ಲಿ ನಾನು 8 ಯುದ್ಧಗಳನ್ನ ನಿಲ್ಲಿಸಿದ್ದೇನೆ, ಜಗತ್ತಿನಲ್ಲಿ ಶಾಂತಿ ತಂದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪದೇ ಪದೇ ಬೆನ್ನುತಟ್ಟಿಕೊಳ್ಳುವುದನ್ನ ನೀವು ಕೇಳೇ ಇರ್ತಿರಿ. ಹೀಗೆ ಹೇಳುತ್ತಲೇ ಟ್ರಂಪ್ ಅವರ ಈ ಅವಧಿಯಲ್ಲಿ ಅಮೆರಿಕ ಸೇನೆ ಬರೋಬ್ಬರಿ 7 ದೇಶಗಳ ಮೇಲೆ ಭೀಕರ ದಾಳಿಗಳನ್ನ ನಡೆಸಿದೆ ಅನ್ನೋದು ಅಚ್ಚರಿ.
ಜಾಗತಿಕ ಮಟ್ಟದಲ್ಲಿ ಅಮೆರಿಕದ (America) ಪಾರುಪತ್ಯ ಮೆರೆಯಲು ಟ್ರಂಪ್ ಹಿಂದೆಂದೂ ಕಾಣದಂತಹ ಆಕ್ರಮಣಕಾರಿ ವಿದೇಶಾಂಗ ನೀತಿ ಅನುಸರಿಸುತ್ತಿದ್ದಾರೆ. ಇತ್ತೀಚೆಗೆ ಇರಾನ್ನ ಸುಪ್ರೀಂ ಲೀಡರ್ ಖಮೇನಿ (Ayatollah Khamenei) ಹತ್ಯೆಯಿಂದ ಹಿಡಿದು, ವೆನೆಜುವೆಲಾದ ಅಧ್ಯಕ್ಷನನ್ನೇ ಬಂಧಿಸುವವರೆಗೂ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ. ಸದ್ಯ ಇಸ್ರೇಲ್ ಜೊತೆಗೂಡಿ ಇರಾನ್ ವಿರುದ್ಧ ಯುದ್ಧದಲ್ಲಿ ತೊಡಗಿರುವ ಡೊನಾಲ್ಡ್ ಟ್ರಂಪ್ಗೆ ಚರ್ಮರೋಗ ಕಾಡುತ್ತಿದೆಯಾ ಅನ್ನೋ ಚರ್ಚೆಯೊಂದು ಎದ್ದಿದೆ.
ಹೌದು. ಟ್ರಂಪ್ ಅವರ ಕತ್ತಿನ ಬಲಭಾಗದಲ್ಲಿ ಕೆಂಪು ಬಣ್ಣದ ಚರ್ಮದ ದದ್ದುಗಳು ಕಾಣಿಸಿಕೊಂಡಿರುವ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ರೆ ಇದು ಕಾಯಿಲೆಯೋ ಅಥವಾ ಚಿಕಿತ್ಸೆಯಿಂದಾದ ಗುರುತುಗಳೋ ಅನ್ನೋದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಮೇಲ್ನೋಟಕ್ಕೆ ಇದು ವೈದ್ಯರು ಸೂಚಿಸಿದ ಕ್ರೀಮ್ ಬಳಕೆಯಿಂದಾಗಿ ಉಂಟಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದುಬೈ ಮೇಲೆ ಡಬಲ್ ಸ್ಟ್ರೈಕ್ – ಯುಎಸ್ ಸೇನಾ ಕಟ್ಟಡ, ಆಸ್ಟ್ರೇಲಿಯಾದ ಬೇಸ್ ಮೇಲೆ ಇರಾನ್ ದಾಳಿ
ಚರ್ಮದ ಚಿಕಿತ್ಸೆಗಾಗಿ ಟ್ರಂಪ್ ‘ಮೊಮೆಟಾಸೋನ್’ (mometasone) ಕ್ರೀಮ್ ಬಳಸುತ್ತಿದ್ದರು. ಇದರ ಪರಿಣಾಮದಿಂದ ದದ್ದುಗಳು ಕಾಣಿಸಿಕೊಂಡಿವೆ. ಆದಾಗ್ಯೂ ಟ್ರಂಪ್ಗೆ ಅನಾರೋಗ್ಯ ಕಾಡುತ್ತಿದೆ ಅನ್ನೋ ವದಂತಿ ಹಲವು ದೇಶಗಳಲ್ಲಿ ಹಬ್ಬಿಕೊಂಡಿದೆ.
ಇದಕ್ಕೆ ಶ್ವೇತಭವನ ಸ್ಪಷ್ಟನೆ ನೀಡಿದ್ದು, ಟ್ರಂಪ್ ಅವರ ಕತ್ತಿನ ಭಾಗದಲ್ಲಿ ಕಂಡುಬಂದ ಕೆಂಪು ದದ್ದುಗಳು (Neck Rash) ಚರ್ಮರೋಗ ಚಿಕಿತ್ಸೆಯಿಂದ ಉಂಟಾದ ಸಾಮಾನ್ಯ ಲಕ್ಷಣಗಳು. ಈ ಚರ್ಮರೋಗದ ದದ್ದುಗಳು ಕೆಲ ವಾರಗಳವರೆಗೆ ಉಳಿಯಬಹುದೆಂದು ವೈದ್ಯರು ಹೇಳಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ವರ್ಷಾನುಗಟ್ಟಲೆ ಟ್ರಾಫಿಕ್ ಕ್ಯಾಮೆರಾ ಹ್ಯಾಕ್, ಮೊಬೈಲ್ ನೆಟ್ವರ್ಕ್ ಟ್ರ್ಯಾಕ್ – ಖಮೇನಿ ಹತ್ಯೆಗೆ ಇಸ್ರೇಲ್ ರಣತಂತ್ರ ಹೇಗಿತ್ತು?
ವದಂತಿ ತಳ್ಳಿಹಾಕಿದ ಟ್ರಂಪ್
ಇನ್ನೂ ಚರ್ಮರೋಗದ ಕುರಿತು ಸುದ್ದಿ ಹರಿದಾಡುತ್ತಿದ್ದಂತೆ, ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಸೋಷಿಯಲ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಾನು ಹಿಂದೆಂದಿಗಿಂತಲೂ ಹೆಚ್ಚು ಸೌಖ್ಯವಾಗಿದ್ದೇನೆ. ಹಿಂದೆ ಜೊ ಬೈಡನ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರೂ ಆ ಬಗ್ಗೆ ಒಂದಕ್ಷರವನ್ನೂ ಗೀಚದ ಮಾಧ್ಯಮಗಳು ತಾವು ಒಂದು ದಿನ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ ಎಂದ ಕೂಡಲೇ ಸುಳ್ಳು ಹರಡುತ್ತಿರುವುದು ಹಾಸ್ಯಾಸ್ಪದ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: Iran Israel War | ಬ್ಯಾರಲ್ಗೆ 100 ಡಾಲರ್ ಸಮೀಪಿಸಿದ ತೈಲ ಬೆಲೆ


