ಮುಂದುವರಿದ ಟ್ರಂಪ್‌ ಹುಚ್ಚಾಟ – ಎಲ್ಲಾ ದೇಶಗಳ ಮೇಲಿನ ಹೆಚ್ಚುವರಿ ಸುಂಕ 15% ಗೆ ಹೆಚ್ಚಿಸಿದ ಟ್ರಂಪ್‌

1 Min Read

ವಾಷಿಂಗ್ಟನ್‌: ಯುಎಸ್ ಸುಪ್ರೀಂ ಕೋರ್ಟ್ ಟ್ರಂಪ್ ಸುಂಕ‌ ಕಾನೂನುಬಾಹಿರವೆಂದು ತೀರ್ಪು ನೀಡಿದ ಬೆನ್ನಲ್ಲೇ ಅಸಮಾಧಾನಕ್ಕೆ ಒಳಗಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಜಾಗತಿಕವಾಗಿ ಎಲ್ಲ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದಾರೆ. ಮೊದಲು 10% ವಿಧಿಸಿದ್ದ ಹೆಚ್ಚುವರಿ ಸುಂಕದ ಪ್ರಮಾಣವನ್ನ ಇದ್ದಕ್ಕಿದ್ದಂತೆ ಶನಿವಾರ (ಇಂದು) 15% ಗೆ ಏರಿಕೆ ಮಾಡಿದ್ದಾರೆ.

ಮತ್ತೆ ತಮ್ಮ ಜಾಗತಿಕ ಸುಂಕ ಯುದ್ಧವನ್ನ ಅತ್ಯಂತ ದೃಢವಾಗಿ ಸಮರ್ಥಿಸಿಕೊಂಡ ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷನಾಗಿ ನಾನು ವಿಶ್ವದಾದ್ಯಂತ ಸುಂಕವನ್ನ ಕಾನೂನುಬದ್ಧವಾಗಿ 10% ರಿಂದ 15% ಗೆ ಹೆಚ್ಚಿಸುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಟ್ರಂಪ್ ಟ್ಯಾರಿಫ್‌ ಗೆ ಭಾರೀ ಹಿನ್ನಡೆ – ಸುಂಕ ಹೇರಲು ಅಧಿಕಾರ ಇಲ್ಲ; ಯುಎಸ್‌ ಸುಪ್ರೀಂ ಕೋರ್ಟ್‌ ಚಾಟಿ

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್‌ ಸೋಷಿಯಲ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಯುಎಸ್‌ ಸುಪ್ರೀಂ ಕೋರ್ಟ್‌ (US Supreme Court) ಸುಂಕ ನೀತಿ ಬಗ್ಗೆ ಹೊರಡಿಸಿದ್ದ ತೀರ್ಪು ಹಾಸ್ಯಾಸ್ಪದ ಹಾಗೂ ಸಂಪೂರ್ಣ ಅಮೆರಿಕನ್‌ ವಿರೋಧಿ ನಿರ್ಧಾರವಾಗಿದೆ. ದಶಕಗಳ ಕಾಲ ಹಲವಾರು ದೇಶಗಳು ಅಮೆರಿಕವನ್ನ ಕಿತ್ತುತಿನ್ನುತ್ತಿವೆ. ಇದರಿಂದ ದೇಶವನ್ನ ರಕ್ಷಿಸಲು ಸುಂಕ ವಿಧಿಸುವ ಕ್ರಮ ಕಾನೂನುಬದ್ಧವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಹೆಚ್ಚುವರಿ ಸುಂಕವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಟ್ರಂಪ್‌, ಮುಂದಿನ ಕೆಲವೇ ತಿಂಗಳುಗಳಲ್ಲಿ ಟ್ರಂಪ್‌ ಆಡಳಿತವು ಹೊಸ ಮತ್ತು ಕಾನೂನು ಬದ್ಧವಾಗಿ ಅನುಮತಿಸಲಾದ ಸುಂಕವನ್ನು ನಿರ್ಧರಿಸುತ್ತದೆ. ಅಮೆರಿಕವನ್ನ ಶ್ರೇಷ್ಠವಾಗಿಸುವ ನಮ್ಮ ಪ್ರಕ್ರಿಯೆಗಳು ಮುಂದುವರಿಯುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕ ಸುಪ್ರೀಂ ಕೋರ್ಟ್‌ ತೀರ್ಪಿಗೆ ಟ್ರಂಪ್‌ ಸವಾಲು – ಎಲ್ಲ ದೇಶಗಳ ಮೇಲೆ 10% ಹೆಚ್ಚುವರಿ ಟ್ಯಾರಿಫ್‌ ಘೋಷಣೆ

Share This Article