200% ಟ್ಯಾರಿಫ್ ವಿಧಿಸುವ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ಕೊನೆಗೊಳಿಸಿದೆ – ನೆತನ್ಯಾಹು ಮುಂದೆ ಟ್ರಂಪ್ ಬಡಾಯಿ

2 Min Read

ವಾಷಿಂಗ್ಟನ್: 200% ಟ್ಯಾರಿಫ್ ವಿಧಿಸುವುದಾಗಿ ಬೆದರಿಕೆ ಹಾಕಿ ಒಂದೇ ದಿನದಲ್ಲಿ ಭಾರತ-ಪಾಕ್ ಯುದ್ಧ ಕೊನೆಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮುಂದೆ ಪುನರುಚ್ಚಿಸಿದ್ದಾರೆ.

ಫ್ಲೋರಿಡಾದಲ್ಲಿರುವ (Florida) ಪಾಮ್ ಬೀಚ್‌ನ ಮಾರ್-ಎ-ಲಾಗೊ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ನಮ್ಮ ಆಡಳಿತ ಪ್ರಮುಖ ಪಾತ್ರವಹಿಸಿದೆ. ನನ್ನ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಒಟ್ಟು ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ದಕ್ಷಿಣ ಏಷ್ಯಾದ ದೇಶಗಳಾದ ಭಾರತ ಮತ್ತು ಪಾಕಿಸ್ತಾನದ ಯುದ್ಧವನ್ನು ಕೊನೆಗೊಳಿಸಿದ್ದು ನಾನೇ. ಯುದ್ಧ ಎಷ್ಟು ಬೇಗ ಕೊನೆಗೊಂಡಿತು ಎಂದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದರು. ನಿಜಕ್ಕೂ ಒಂದೇ ದಿನದಲ್ಲಿ ಕೊನೆಗೊಳಿಸಿದೆ. ಈಗಿನಿಂದ ಎರಡು ದೇಶದೊಂದಿಗಿನ ವ್ಯಾಪಾರವನ್ನು ಕಡಿತಗೊಳಿಸಿ, 200% ಸುಂಕ ವಿಧಿಸುವುದಾಗಿ ಬೆದರಿಸಿದ್ದೆ. ಮಾರನೇ ದಿನವೇ ನನಗೆ ಕರೆಮಾಡಿ 35 ವರ್ಷಗಳ ಹೋರಾಟವನ್ನು ಕೊನೆಗೊಳಿಸುವುದಾಗಿ ತಿಳಿಸಿದರು ಎಂದಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ ಕೊನೆಯಾಗುವ ಸಮಯ ಹತ್ತಿರದಲ್ಲಿದೆ: ಟ್ರಂಪ್‌

ಇದೇ ವೇಳೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಯುದ್ಧವನ್ನು ಕೊನೆಗೊಳಿಸಿದ್ದೇನೆ. ಒಂದು ವೇಳೆ ಯುದ್ಧ ಮುಂದುವರಿದರೆ ವ್ಯಾಪಾರ ಕಡಿತಗೊಳಿಸಿ, ಸುಂಕವನ್ನು ಹೆಚ್ಚಿಸುವುದಾಗಿ ಬೆದರಿಕೆ ಹಾಕಿದ್ದೆ ಎಂದು ತಿಳಿಸಿದ್ದಾರೆ.

ಮೇ 10ರಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಭಾರತ ಮತ್ತು ಪಾಕಿಸ್ತಾನ ಕದನಕ್ಕೆ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಘೋಷಿಸಿದ್ದರು. ಅದಾದ ಬಳಿಕ ಟ್ರಂಪ್ ಈವರೆಗೂ ಸುಮಾರು 70ಕ್ಕೂ ಹೆಚ್ಚು ಬಾರಿ ಈ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.

ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ಮೇ 7ರಂದು ಆಪರೇಷನ್ ಸಿಂಧೂರ ನಡೆಸಿತು. ಅಲ್ಲಿಂದ ಎರಡು ದೇಶಗಳ ನಡುವೆ ಉದ್ವಿಗ್ನತೆ ಪ್ರಾರಂಭವಾಯಿತು. ಅದಾದ ಬಳಿಕ ನಾಲ್ಕು ದಿನಗಳ ಕಾಲ ನಿರಂತರವಾಗಿ ಡ್ರೋನ್, ಕ್ಷಿಪಣಿ ದಾಳಿ ನಡೆಸಿದವು. ಬಳಿಕ ಮೇ 10ರಂದು ಕದನ ವಿರಾಮ ಘೋಷಿಸಲಾಗಿತ್ತು.ಇದನ್ನೂ ಓದಿ: ಪುಟಿನ್‌ ಮನೆ ಮೇಲೆ 91 ಡ್ರೋನ್‌ ದಾಳಿ ನಡೆಸಿತ್ತಾ ಉಕ್ರೇನ್‌ – ಯುದ್ಧ ನಿಲ್ಲಿಸುವ ಮಾತುಕತೆ ಹೊತ್ತಲ್ಲೇ ಟ್ವಿಸ್ಟ್‌

Share This Article