ವಾಷಿಂಗ್ಟನ್: ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ನಾನೇ ಎಂದು ಅಮೆರಿಕದ (USA) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಣೆ ಮಾಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಟ್ರಂಪ್ ವೆನೆಜುವೆಲಾದ (Venezuela) ಹಂಗಾಮಿ ಅಧ್ಯಕ್ಷ ಎಂಬ ಹುದ್ದೆಯೊಂದಿಗೆ ತಮ್ಮನ್ನು ಚಿತ್ರಿಸಿಕೊಳ್ಳುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಪೋಸ್ಟ್, ಜನವರಿ 2026 ರ ಹೊತ್ತಿಗೆ ಟ್ರಂಪ್ ಅವರನ್ನು ವೆನೆಜುವೆಲಾದ ಅಧ್ಯಕ್ಷ ಎಂದು ಬಿಂಬಿಸುವ ಕಿಪೀಡಿಯಾ ಪುಟದ ಡಿಜಿಟಲ್ ಸಂಪಾದಿತ ಚಿತ್ರವನ್ನು ತೋರಿಸಿದೆ. ಇದನ್ನೂ ಓದಿ: ಅಮೆರಿಕದ ಉತ್ಪನ್ನಗಳನ್ನು ಮಾತ್ರ ವೆನೆಜುವೆಲಾ ಖರೀದಿಸಬೇಕು: ಟ್ರಂಪ್ ಕಟ್ಟಪ್ಪಣೆ
Donald J. Trump Truth Social Post 08:23 PM EST 01.11.26 pic.twitter.com/CqZlOLfBC8
— Commentary Donald J. Trump Posts From Truth Social (@TrumpDailyPosts) January 12, 2026
ವೆನೆಜುವೆಲಾ ವಿರುದ್ಧ ಅಮೆರಿಕ ದೊಡ್ಡ ಕಾರ್ಯಾಚರಣೆಯನ್ನು ನಡೆಸಿದ ಬಳಿಕ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿ ನ್ಯೂಯಾರ್ಕ್‌ಗೆ ಕರೆ ತಂದಿದೆ. ಮಾದಕವಸ್ತು-ಭಯೋತ್ಪಾದನೆಗೆ ಸಂಬಂಧಿಸಿದ ಪಿತೂರಿಯ ಆರೋಪವನ್ನು ಮಡುರೋ ಮೇಲೆ ಹೊರಿಸಲಾಗಿದೆ. ಇದನ್ನೂ ಓದಿ: ವೆನೆಜುವೆಲಾದಿಂದ 50 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ನಮಗೆ ಸಿಗಲಿದೆ: ಟ್ರಂಪ್

