ಪುಟಿನ್‌ಗೆ ಭಾರತದಲ್ಲಿ ಭವ್ಯ ಸ್ವಾಗತ – ಟ್ರಂಪ್‌ಗೆ ನೊಬೆಲ್‌ ಸಿಗಬೇಕು: ಪೆಂಟಗನ್‌ ನಿವೃತ್ತ ಅಧಿಕಾರಿ ವ್ಯಂಗ್ಯ

2 Min Read

ವಾಷಿಂಗ್ಟನ್‌: ಭಾರತದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಅವರಿಗೆ ಸಿಕ್ಕಿದ ಭವ್ಯ ಸ್ವಾಗತಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರಿಗೆ ನೊಬೆಲ್‌ ಪ್ರಶಸ್ತಿ (Nobel Prize) ನೀಡಬೇಕೆಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನಿವೃತ್ತ ಅಧಿಕಾರಿ ವ್ಯಂಗ್ಯವಾಡಿದ್ದಾರೆ.

ಪೆಂಟಗನ್‌ ನಿವೃತ್ತ ಅಧಿಕಾರಿ ಮೈಕೆಲ್ ರೂಬಿನ್ (Michael Rubin) ಭಾರತದ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿ, ಭಾರತ ಮತ್ತು ರಷ್ಯಾವನ್ನು ಹತ್ತಿರಕ್ಕೆ ತಂದಿದ್ದಕ್ಕಾಗಿ ಟ್ರಂಪ್‌ಗೆ ನಾವು ಗೌರವ ನೀಡಬೇಕು. ಬೇರೆ ಕಡೆ ಸಿಗದಷ್ಟು ಗೌರವ ಪುಟಿನ್‌ಗೆ ಭಾರತ ನೀಡಿದೆ. ಈ ಗೌರವ ಸಿಗಲು ಕಾರಣರಾದ ಟ್ರಂಪ್‌ ಅವರ ಪಾತ್ರವನ್ನು ನಾವು ಕಡೆಗಣಿಸಬಾರದು ಎಂದು ಟಾಂಗ್‌ ನೀಡಿದ್ದಾರೆ.

ಪುಟಿನ್‌ ಅವರ ಭೇಟಿಯ ಸಮಯದಲ್ಲಿ ಸಹಿ ಹಾಕಲಾಗಿರುವ ಒಪ್ಪಂದಗಳು ಎರಡೂ ದೇಶಗಳಿಗೆ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ರಂಪ್‌ ನಡೆಸಿಕೊಂಡ ರೀತಿಗೆ ಭಾರತ ಯಾವ ರೀತಿ ಅತೃಪ್ತಿ ವ್ಯಕ್ತಪಡಿಸಿದೆ ಎನ್ನುವುದನ್ನು ಈ ಒಪ್ಪಂದಗಳಿಂದ ತಿಳಿಯುತ್ತದೆ ಎಂದರು. ಇದನ್ನೂ ಓದಿ: ಟ್ರಂಪ್ ಬೆದರಿಕೆಗೆ ಪುಟಿನ್ ಡೋಂಟ್ ಕೇರ್, ಭಾರತಕ್ಕೆ ತೈಲ ಪೂರೈಕೆ ಮುಂದುವರಿಕೆ – `ವಿಷನ್ 2030’ಗೆ ಅಂಕಿತ

ಟ್ರಂಪ್‌ ಭಾರತಕ್ಕೆ ಉಪನ್ಯಾಸ ನೀಡುವುದನ್ನು ನಿಲ್ಲಿಸಬೇಕು. ಟ್ರಂಪ್ ಎಂದಿಗೂ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಭಾರತೀಯರು ಭಾರತದ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಪ್ರಧಾನಿ ಮೋದಿಯವರನ್ನು ಆಯ್ಕೆ ಮಾಡಿದ್ದಾರೆ ಎಂಬುದು ಅಮೆರಿಕನ್ನರಿಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತವನ್ನು ಬೆಂಬಲಿಸಿ ಟ್ರಂಪ್‌ ಬೂಟಾಟಿಕೆಯನ್ನು ಬಯಲು ಮಾಡಿದ ಪುಟಿನ್‌

ಭಾರತ ಅತ್ಯಂತ ಜನಸಂಖ್ಯೆ ಹೊಂದಿರುವ ದೇಶ. ಇದು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಅದಕ್ಕಾಗಿ ಅದಕ್ಕೆ ಇಂಧನ ಬೇಕು. ನಾವು ರಷ್ಯಾದಿಂದ ವಸ್ತುಗಳನ್ನು ಖರೀದಿಸುತ್ತಿರುವಾಗ ಭಾರತಕ್ಕೆ ಇಂಧನ ಖರೀದಿ ಮಾಡಬೇಡಿ ಎಂದು ಹೇಳುವುದು ಎಷ್ಟು ಸರಿ? ಈ ಬೂಟಾಟಿಕೆಯನ್ನು ನಾವು ಮೊದಲು ನಿಲ್ಲಿಸಬೇಕು. ಈ ಸಂದರ್ಭದಲ್ಲಿ ಉಪದೇಶ ನೀಡದೇ ನಾವು ಬಾಯಿ ಮುಚ್ಚುಕೊಳ್ಳುವುದು ಉತ್ತಮ ಎಂದು ಟ್ರಂಪ್‌ ವಿರುದ್ಧ ಕಿಡಿಕಾರಿದರು.

Share This Article