20 ಪ್ರಯಾಣಿಕರನ್ನು ಬಲಿ ಪಡೆದ ಆಂಧ್ರದ ಕರ್ನೂಲ್ ಬಸ್ ದುರಂತಕ್ಕೆ ನಟಿ ರಶ್ಮಿಕಾ ಮಂದಣ್ಣ ದುಃಖ ವ್ಯಕ್ತಪಡಿಸಿದ್ದಾರೆ.
ಕರ್ನೂಲ್‌ನಿಂದ ಬಂದ ಸುದ್ದಿ ನನ್ನ ಹೃದಯವನ್ನು ಭಾರವಾಗಿಸಿದೆ. ಉರಿಯುತ್ತಿದ್ದ ಬಸ್ಸಿನೊಳಗೆ ಆ ಪ್ರಯಾಣಿಕರು ಏನೆಲ್ಲಾ ಅನುಭವಿಸಿರಬೇಕು ಎಂದು ಊಹಿಸಿಕೊಳ್ಳುವುದೂ ಅಸಾಧ್ಯ. ಪುಟ್ಟ ಮಕ್ಕಳು ಸೇರಿದಂತೆ ಇಡೀ ಕುಟುಂಬ ಮತ್ತು ಅನೇಕರು ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು ಎಂದು ಯೋಚಿಸುವುದು ನಿಜಕ್ಕೂ ಹೃದಯವಿದ್ರಾವಕ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ದುರಂತದಿಂದ ಬಾಧಿತರಾದ ಪ್ರತಿಯೊಂದು ಕುಟುಂಬದೊಂದಿಗೆ ನನ್ನ ಪ್ರಾರ್ಥನೆಗಳು ಇವೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಶ್ಮಿಕಾ ಸಂತಾಪ ಸೂಚಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ದೇಶವನ್ನೇ ಆಘಾತಕ್ಕೆ ದೂಡಿದೆ. 43 ಪ್ರಯಾಣಿಕರಿದ್ದ ಬಸ್ ಪ್ರಯಾಣದ ಮಧ್ಯದಲ್ಲಿ ಬೆಂಕಿಗೆ ಆಹುತಿಯಾಯಿತು. ಇಬ್ಬರು ಚಾಲಕರು ಸೇರಿದಂತೆ 23 ಜನರು ಅಪಾಯದಿಂದ ಪಾರಾಗಿದ್ದಾರೆ. 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
