ಕೋಳಿ ತುಂಬಿದ್ದ ಲಾರಿ ಪಲ್ಟಿ-ಸತ್ತ ಕೋಳಿಗಳನ್ನು ಹೊತ್ತೊಯ್ದ ಸ್ಥಳೀಯರು

Public TV
1 Min Read

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕೋಳಿಯನ್ನು ಸಾಗಿಸುತ್ತಿದ್ದ ಕ್ಯಾಂಟರ್ ಲಾರಿಯೊಂದು ಪಲ್ಟಿಯಾದ ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮೂಡಲಪಾಳ್ಯ ಬಳಿ ಈ ದುರ್ಘಟನೆ ನಡೆದಿದ್ದು, ಸುಮಾರು ಸಾವಿರಾರು ಕೋಳಿಗಳು ಸಾವನ್ನಪ್ಪಿದೆ.

ಖಾಸಗಿ ಕೋಳಿಫಾರಂನಿಂದ ನೆಲಮಂಗಲ ಕಡೆಗೆ ಕೋಳಿಗಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಚಾಲಕ ಸೇರಿದಂತೆ ಲಾರಿಯಲ್ಲಿದ್ದವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ನೆಲಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಪರ್ಯಾಸವೆಂಬತೆ ಅಪಘಾತವಾಗಿದ್ದರೂ ಸ್ಥಳೀಯರು ಸತ್ತ ಕೋಳಿಗಳನ್ನು ಬಿಡದೆ, ಮನೆಗೆ ಕೊಂಡಯ್ಯಲು ಮುಗಿಬಿದ್ದಿದ್ದಾರೆ. ಇನ್ನೂ ಈ ಘಟನೆ ಬೆಳಗಿನ ಜಾವ ಸಂಭವಿಸಿದ್ದು, ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *