ರೋಬೋಟ್ ಡಾಗ್ ಆಯ್ತು, ಈಗ ಸಾಕರ್ ಡ್ರೋನ್ – ಮತ್ತೊಂದು ವಿವಾದದಲ್ಲಿ ಗಲ್ಗೋಟಿಯಾ ವಿವಿ

3 Min Read

ನವದೆಹಲಿ: AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಚೀನಾ ನಿರ್ಮಿತ ರೋಬೋಟ್‌ ಡಾಗ್‌ ಪ್ರದರ್ಶಿಸಿ ವಿವಾದಕ್ಕೆ ಗುರಿಯಾಗಿದ್ದ ಗೆಲ್ಗೋಟಿಯಾ ವಿಶ್ವವಿದ್ಯಾಲಯ (Galgotias University) 24 ಗಂಟೆಯಲ್ಲೇ ಮತ್ತೊಂದು ವಿವಾದದ ಸುಳಿಗೆ ಸಿಲುಕಿದೆ. ವಿವಿಯ ಅಧ್ಯಾಪಕರು ಹೇಳಿಕೊಂಡ ʻಡ್ರೋನ್‌ ಸಾಕರ್‌ ಅರೇನಾʼ (Drone Soccer Arena) ಬಗ್ಗೆ ಭಾಟೀ ಟೀಕೆ ವ್ಯಕ್ತವಾಗುತ್ತಿದೆ.

ಏನಿದು ಹೊಸ ವಿವಾದ?
ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Video Viral) ಆಗುತ್ತಿರುವ ವಿಡಿಯೋನಲ್ಲಿ, ಗೆಲ್ಗೋಟಿಯಾ ವಿವಿಯ ಸಂವಹನ ಪ್ರಾಧ್ಯಾಪಕಿಯೊಬ್ಬರು ʻಡ್ರೋನ್‌ ಸಾಕರ್‌ ಅರೇನಾʼ ಬಗ್ಗೆ ಮಾತನಾಡಿದ್ದಾರೆ. ಇದು ಬಹಳ ಆಸಕ್ತಿದಾಯಕ ವಿಷಯವಾಗಿದೆ, ಇದರ ಎಂಡ್‌ ಟು ಎಂಡ್‌ ಅಪ್ಲಿಕೇಷನ್‌ ಎಲ್ಲವನ್ನೂ ವಿಶ್ವವಿದ್ಯಾಲಯದಲ್ಲೇ ತಯಾರಿಸಲಾಗಿದೆ. ಇದು ಭಾರತದ ಮೊದಲ ಡ್ರೋನ್‌ ಸಾಕರ್‌ ಅರೇನಾ ಆಗಿದ್ದು, ಗೆಲ್ಗೋಟಿಯಾಸ್‌ ಕ್ಯಾಂಪಸ್‌ನಲ್ಲಿ ನೋಡಲು ಸಿಗುತ್ತದೆ. ಇದರಲ್ಲಿ ಮಕ್ಕಳು ಗೇಮ್ಸ್‌ ಆಡಬಹುದು, ಜೊತೆಗೆ ಹಾರಿಸಹುದು, ಫ್ಲೇಜಿಂಗ್ ಕೌಶಲ್ಯಗಳನ್ನು ಹೆಚ್ಚಿಸಬಹುದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೀನಾ ನಿರ್ಮಿತ ರೋಬೋಟ್ ಡಾಗ್ ಖರೀದಿಸಿ AI ಶೃಂಗದಲ್ಲಿ ಪ್ರದರ್ಶನ – ಗಲ್ಗೋಟಿಯಾ ವಿವಿಗೆ ಗೇಟ್‌ಪಾಸ್‌

ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಸೋಷಿಯಲ್‌ ಮೀಡಿಯಾ ಬಳಕೆದಾರರು, ಇದು ವಿವಿಯ ಡ್ರೋನ್‌ ಅಲ್ಲ ಎಂದು ಅಲ್ಲಗಳೆದಿದ್ದಾರೆ. ವಿವಿಯದ್ದು ಹೇಳಿಕೊಳ್ಳುತ್ತಿರುವ ʻಸಾಕರ್‌ ಡ್ರೋನ್‌ ಅರೇನಾʼ ದಕ್ಷಿಣ ಕೊರಿಯಾದ ನಿರ್ಮಿತದ್ದು ಎಂದು ಆರೋಪಿಸಿದ್ದಾರೆ. 2017 ರಲ್ಲಿ ಡ್ರೋನ್‌ ಕ್ರೀಡೆ ಆರಂಭಿಸುವ ಮುನ್ನವೇ 2015 ರಲ್ಲಿ ದಕ್ಷಿಣ ಕೊರಿಯಾ ಇದನ್ನ ಆರಂಭಿಸಿತು. ಇದನ್ನ World Air Sports Federation ಗುರುತಿಸಿತ್ತು. ಅಲ್ಲದೇ ಈ ಸಾಧನವು ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟ್ರೈಕರ್ V3 ARF ನಂತಹ ಉತ್ಪನ್ನಗಳನ್ನೇ ಹೋಲುತ್ತಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾದ ವಿಡಿಯೋಗಳನ್ನು ಹರಿಯಬಿಡಲಾಗಿದೆ.

24 ಗಂಟೆಯಲ್ಲಿ ಎರಡೆರಡು ವಿವಾದ
ಇದಕ್ಕೂ ಮುನ್ನ ಚೀನಾ ನಿರ್ಮಿತ ರೋಬೋಟ್ ಡಾಗ್ (Robot Dog) ಅನ್ನು ತಾವೇ ಅಭಿವೃದ್ಧಿಪಡಿಸಿದ್ದಾಗಿ ಪ್ರದರ್ಶಿಸಿ ಗೆಲ್ಗೋಟಿಯಾ ವಿವಿ ವಿವಾದಕ್ಕೆ ಗುರಿಯಾಗಿತ್ತು. ಚೀನಿ ರೋಬೋಟ್ ಡಾಗ್‌ ಯುನಿಟ್ರೀ ಗೋ2 (Unitree Go2) ಆಗಿದೆ. ಇದು ಚೀನಾ‌ ಮೂಲದ ರೋಬೋಟಿಕ್ಸ್‌ ಕಂಪನಿ ತಯಾರಿಸಿದೆ. ಇದು ಭಾರತದಲ್ಲಿ 2-3 ಲಕ್ಷ ರೂ.ಗಳಿಗೆ ಆನ್‌ಲೈನ್‌ನಲ್ಲಿ ಲಭ್ಯವಿದೆ. ಇದನ್ನ ಖರೀದಿಸಿದ್ದ ಗ್ಯಾಲ್ಗೋಟಿಯಾ ವಿಶ್ವವಿದ್ಯಾಲಯ ಓರಿಯನ್ (Orion) ಹೆಸರಿನಿಂದ ಎಐ ಶೃಂಗದಲ್ಲಿ ಪರಿಚಯಿಸಿತ್ತು. ಇದನ್ನೂ ಓದಿ: ಮತ್ತೆ 3 ಮರಿಗಳಿಗೆ ಜನ್ಮ ನೀಡಿದ ʻಗಾಮಿನಿʼ – ಕುನೋದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋದಲ್ಲಿ ವಿಶ್ವವಿದ್ಯಾಲಯದ ಪ್ರತಿನಿಧಿ ಎಂದು ಹೇಳಿಕೊಂಡ ಮಹಿಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ರೋಬೋಟ್‌ನ ವೈಶಿಷ್ಟ್ಯಗಳನ್ನ ವಿವರಿಸುತ್ತಿರುವುದು, ಜೊತೆಗೆ ಗ್ಯಾಲ್ಗೋಟಿಯಾ ವಿಶ್ವವಿದ್ಯಾಲಯವೇ ಇದನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿರುವುದು ಕಂಡುಬಂದಿತ್ತು. ವಿವಿಯ ಪ್ರಾಧ್ಯಾಪಕಕಿ ನೇಹಾ ಸಿಂಗ್ ಕೂಡ ಇದು ತಾವೇ ನಿರ್ಮಿಸಿದ ರೋಬೋಟ್‌ ಎಂದು ಹೇಳಿದ್ದರು. ಆದ್ರೆ ಸೋಷಿಯಲ್‌ ಮೀಡಿಯಾ ಬಳಕೆದಾರರು ಇದು ಚೀನಾ ನಿರ್ಮಿತ ʻಯುನಿಟ್ರೀ ಗೋ2ʼ ಎಂದು ಗುರುತಿಸಿದ್ದರು.

ಈ ಬೆನ್ನಲ್ಲೇ ಗ್ಯಾಲ್ಗೋಟಿಯಾ ವಿವಿ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ರಾಜಕೀಯ ನಾಯಕರೂ ಆಕ್ರೋಶ ಹೊರಹಾಕಿದ್ದರು. ಭಾರತ ಆಯೋಜಿಸಿದ್ದ ಉನ್ನತ ಮಟ್ಟದ ತಂತ್ರಜ್ಞಾನ ಶೃಂಗದಲ್ಲಿ ಚೀನಾ ನಿರ್ಮಿತ ಕೃತಕ ಬುದ್ಧಿಮತ್ತೆ ರೋಬೋಟ್‌ಗಳನ್ನ ಪ್ರದರ್ಶಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಮುಜುಗರ ಉಂಟಾಗುವಂತೆ ಮಾಡಿದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಎಕ್ಸ್‌ಪೋದಿಂದ ಜಾಗ ಖಾಲಿ ಮಾಡುವಂತೆ ಸೂಚನೆ ಕೊಡಲಾಗಿತ್ತು.

ಗ್ಯಾಲ್ಗೋಟಿಯಾ ವಿವಿ ಸ್ಪಷ್ಟನೆ
ವಿವಾದ ಜೋರಾಗುತ್ತಿದ್ದಂತೆ ಗ್ಯಾಲ್ಗೋಟಿಯಾ ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿತ್ತು. ಈ ಸಾಧನವನ್ನ ನಾವೇ ನಿರ್ಮಿಸಿದ್ದೇವೆ ಎಂದು ಎಂದಿಗೂ ಹೇಳಿಕೊಂಡಿಲ್ಲ. Robot Dog ಅನ್ನು ಚೀನಾದ ರೋಬೋಟಿಕ್ಸ್ ಸಂಸ್ಥೆಯಾದ ಯುನಿಟ್ರೀಯಿಂದ ಖರೀದಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಲಿಕಾ ಸಾಧನವಾಗಿ ಬಳಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದರು.

Share This Article