ಶಂಕಿತ ಉಗ್ರರಿಗೆ ಆಶ್ರಯ ಕೊಟ್ಟಿದ್ದವರಿಗೆ ಶುರುವಾಯ್ತು ಸಂಕಷ್ಟ – ಮಾಲೀಕರ ಮೇಲೆ ಕೇಸ್?

Public TV
3 Min Read

ಬೆಂಗಳೂರು: ಬುಧವಾರ ಬೆಂಗಳೂರಿನಲ್ಲಿ (Bengaluru) ಭಯಾನಕ ಸ್ಫೋಟವನ್ನು ನಡೆಸಲು ತಯಾರಿ ನಡೆಸಿದ್ದ ಐವರು ಉಗ್ರರನ್ನು (Suspected Terrorists) ಸಿಸಿಬಿ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದರು. ಆದರೆ ಇದೀಗ ಶಂಕಿತ ಉಗ್ರರ ಪೂರ್ವ ಪರ ತಿಳಿಯದೇ ಆಶ್ರಯ ಕೊಟಿದ್ದವರಿಗೆ ಸಂಕಷ್ಟ ಎದುರಾಗಿದೆ.

ಮನೆ ಬಾಡಿಗೆ ಕೊಡಬೇಕಾದರೆ ಬಾಡಿಗೆದಾರರ ಪೂರ್ವ ಪರ ತಿಳಿಯದೇ ಮನೆ ಕೊಟ್ಟರೆ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅದೇ ರೀತಿ ಶಂಕಿತ ಉಗ್ರರ ಹಿನ್ನೆಲೆ ಅರಿಯದೆ ಪದ್ಮಾ ಉಗ್ರರಿಗೆ ಮನೆ ಬಾಡಿಗೆ ಕೊಟ್ಟಿದ್ದರು. ಮನೆ ಬಾಡಿಗೆ ಕೊಡಬೇಕಾದರೆ ಪಾಲಿಸಬೇಕಾದ ನಿಯಮ ಪಾಲಿಸದೇ ಮನೆ ಕೊಟ್ಟಿದ್ದಾರೆ. ಅಲ್ಲದೇ ಶಂಕಿತ ವ್ಯಕ್ತಿಗಳಿಂದ ಯಾವುದೇ ಕರಾರು ಪತ್ರ ಪಡೆಯದೇ ಮನೆ ಬಾಡಿಗೆ ಕೊಟ್ಟಿರುವ ಆರೋಪದ ಮೇಲೆ ಪದ್ಮಾ ವಿರುದ್ಧ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಶಂಕಿತ ಉಗ್ರರಿಗೆ ಬೆಂಗಳೂರು ಮಾತ್ರವಲ್ಲ ಹಿಂದೂ ನಾಯಕರೂ ಟಾರ್ಗೆಟ್!

ಈ ಹಿಂದೆ ಇದೇ ರೀತಿಯಾದ ಹಲವು ಪ್ರಕರಣಗಳಲ್ಲಿ ಮನೆ ಮಾಲೀಕರ ಮೇಲೆ ಕೇಸ್ ದಾಖಲಾಗಿದೆ. ಹಾಗೆಯೇ ದಾಖಲಾತಿ ಪಡೆದುಕೊಳ್ಳದೇ ಮನೆ ಕೊಟ್ಟಿರುವ ನಿರ್ಲಕ್ಷ್ಯದ ಆರೋಪದ ಮೇಲೆ ಮನೆ ಮಾಲಕಿ ಪದ್ಮಾ ವಿರುದ್ಧ ಹೆಬ್ಬಾಳ (Hebbala) ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: INDIA ಒಕ್ಕೂಟದ ಸಭೆಯೇ ಉಗ್ರರ ಟಾರ್ಗೆಟ್

ಬಂಧಿತ ಐವರು ಶಂಕಿತ ಉಗ್ರರು ಪ್ರತಿ ಆರು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಮನೆ ಬದಲಾವಣೆ ಮಾಡುತ್ತಿದ್ದರು. ಅಲ್ಲದೇ ಮನೆ ಬಾಡಿಗೆ ಪಡೆಯಲು ಉಗ್ರರು ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ಗೋವಿಂದಪುರದಿಂದ ಸುಲ್ತಾನ್‌ಪಾಳ್ಯ ಮುಖ್ಯರಸ್ತೆಯಲ್ಲಿರುವ ಮನೆಗೆ ಬಂದಿದ್ದರು. ಶಂಕಿತರು ಒಂದು ಮನೆಯಲ್ಲಿ ಆರು ತಿಂಗಳು ಮಾತ್ರ ವಾಸವಿರುತ್ತಿದ್ದರು. ಒಂದೇ ಮನೆಯಲ್ಲಿ ವರ್ಷಗಟ್ಟಲೆ ಇದ್ದರೆ ಅನುಮಾನ ಬರುತ್ತದೆ ಎಂಬ ಕಾರಣಕ್ಕೆ ಆಗಾಗ ಮನೆ ಬದಲಾಯಿಸುತ್ತಿದ್ದರು. ಇದನ್ನೂ ಓದಿ: 2 ದಿನದೊಳಗೆ ದೊಡ್ಡ ಮಟ್ಟದ ಸ್ಪೋಟಕ್ಕೆ ನಡೆದಿತ್ತು ಸಿದ್ಧತೆ!

ಪ್ರತಿಬಾರಿ ಬಾಡಿಗೆ ಮನೆ ಮಾಡುವಾಗಲೂ ಮಹಿಳೆಯರನ್ನು ಮುಂದಿಟ್ಟುಕೊಂಡು ಮನೆ ಹುಡುಕುತ್ತಿದ್ದರು. ಸುಲ್ತಾನ್ ಪಾಳ್ಯದಲ್ಲಿರುವ ಪದ್ಮಾ ಅವರ ಮನೆ ಬಾಡಿಗೆ (Rented House) ಪಡೆಯುವ ಸಂದರ್ಭ ಶಂಕಿತ ಉಗ್ರ ಸೈಯದ್ ಸುಹೇಲ್‌ನ ಪತ್ನಿ ಕಡೆಯಿಂದ ಮನೆ ಬಾಡಿಗೆ ಪಡೆಯಲಾಗಿತ್ತು. ಅಲ್ಲದೇ ಸೈಯದ್ ಸುಹೇಲ್ ಬಂದ ಎರಡೇ ತಿಂಗಳಿಗೆ ಮನೆ ಖಾಲಿ ಮಾಡುವುದಾಗಿ ಹೇಳಿದ್ದ. ಇದನ್ನೂ ಓದಿ: ರೌಡಿಗಳಾಗಿ ಜೈಲು ಸೇರಿದ್ದವರಿಗೆ ಸಿಕ್ಕಿತು ಉಗ್ರರ ಪಾಠ!

ಸೈಯದ್ ಸುಹೇಲ್ ಖಾನ್ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನಸಾಗಿಸುತ್ತಿದ್ದ. 2017ರಲ್ಲಿ ನೂರ್ ಅಹ್ಮದ್ ಎಂಬಾತನ ಕೊಲೆ ಕೃತ್ಯಕ್ಕೆ ಸೈಯದ್ ಸುಹೇಲ್ ಇನ್ನೋರ್ವ ಶಂಕಿತ ಉಗ್ರ ಜುನೈದ್‌ಗೆ ಸಾಥ್ ನೀಡಿದ್ದ. ಕೊಲೆ ಪ್ರರಣದಲ್ಲಿ ಜೈಲು ಸೇರಿದ್ದ ಸಮಯದಲ್ಲಿ ಎಲ್‌ಇಟಿ ಶಂಕಿತ ಉಗ್ರ ನಾಸಿರ್‌ನ ಪರಿಚಯವಾಗಿತ್ತು. ಬಳಿಕ ಜುನೈದ್ ವಿದೇಶಕ್ಕೆ ಪರಾರಿಯಾಗಿದ್ದ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಸ್ಫೋಟಕ್ಕೆ ಸಂಚು – ಐವರು ಶಂಕಿತ ಉಗ್ರರು ಅರೆಸ್ಟ್‌

ವಿದೇಶದಲ್ಲಿದ್ದ ಜುನೈದ್ ಸೂಚನೆ ಮೇರೆಗೆ ಬೆಂಗಳೂರಿನ ಭಯೋತ್ಪಾದಕ ಚಟುವಟಿಕೆಗಳಿಗೆ ಸೈಯದ್ ಸುಹೇಲ್ ಖಾನ್ ಉಸ್ತುವಾರಿ ವಹಿಸಿದ್ದ. ಸುಲ್ತಾನ್‌ಪಾಳ್ಯದಲ್ಲಿದ್ದ (Sulthanpalya) ಆತನ ಬಾಡಿಗೆ ಮನೆಯಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚಿನ ಸಭೆ ನಡೆಸಲಾಗಿತ್ತು. ಅಲ್ಲದೇ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ಅದೇ ಮನೆಯಲ್ಲಿ ಸಂಗ್ರಹಿಸಿಡಲಾಗಿತ್ತು. ಇದನ್ನೂ ಓದಿ: ಕಿರಿಯ ಮಗನ ಮದುವೆಗೆ ಅಡ್ಡಿಯಾಗುತ್ತೆ ಎಂದು ಮಾನಸಿಕ ಅಸ್ವಸ್ಥ ಮಗನನ್ನೇ ಕೊಂದ ತಂದೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್