ಫಿಲಿಪೈನ್ಸ್‌ನಲ್ಲಿ ಭಾರೀ ಮಳೆಯಿಂದ ಭೂಕುಸಿತ – 14 ಮಂದಿ ದುರ್ಮರಣ

Public TV
1 Min Read

ಮನಿಲಾ: ಫಿಲಿಪೈನ್ಸ್‌ನಲ್ಲಿ (Philippines) ಚಂಡಮಾರುತದ ಪರಿಣಾಮ ಭಾರೀ ಮಳೆಯಿಂದ (Rain) ಉಂಟಾದ ಪ್ರವಾಹ ಹಾಗೂ ಭೂಕುಸಿತದಿಂದಾಗಿ (Landslide) 14 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ದೇಶಾದ್ಯಂತ ವಿಮಾನಗಳ ಹಾರಾಟ ಹಾಗೂ ಹಡಗು ಸಂಚಾರ ಸ್ಥಗಿತಗೊಂಡಿದೆ. ಇದರ ಪರಿಣಾಮ ಸಾವಿರಾರು ಜನ ಪ್ರಯಾಣಿಕರು ಪರದಾಡುತ್ತಿದ್ದಾರೆ.

ದೇಶದ ಯಾಗಿ ಇಲೋಕೋಸ್ ನಾರ್ಟೆ ಪ್ರಾಂತ್ಯದ ಪಾವೊಯ್ ನಗರ ಸೇರಿದಂತೆ ದಕ್ಷಿಣ ಚೀನಾ ಸಮುದ್ರದ ಭಾಗದಲ್ಲಿ ಗಂಟೆಗೆ 75-125 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಮಳೆ ಹೆಚ್ಚಾಗುವ ಆತಂಕ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು – ಎರಡು ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಜಮೆಯಾಗದ ಸಂಬಳ

ನವೋಟಾಸ್ ಬಂದರಿನ ಮನಿಲಾ ಕೊಲ್ಲಿಯಲ್ಲಿ ಲಂಗರು ಹಾಕಲಾಗಿದ್ದ ಕಮಿಲ್ಲಾ ಎಂಬ ತರಬೇತಿ ಹಡಗು ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದ ಹಡಗು ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಮಳೆಯಿಂದ ದೇಶದ ರಾಜಧಾನಿ ಮನಿಲಾ ಸೇರಿದಂತೆ ಹಲವು ಭಾಗಗಳಲ್ಲಿ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳು ಇಂದು ಸ್ಥಗಿತಗೊಂಡಿವೆ. ಇದನ್ನೂ ಓದಿ: ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತಿಸ್ತಿದ್ದಾರೆ: ಪ್ರದೀಪ್ ಈಶ್ವರ್ ಕಿಡಿ

Share This Article