ನೀಲಿತಾರೆಗೆ ಹೋಲಿಸಿ ಟ್ರೋಲ್ : ಪ್ರಧಾನಿ ಮೊರೆ ಹೋದ ಗಾಯಕಿ ನೇಹಾ

Public TV
1 Min Read

ತ್ತರ ಪ್ರದೇಶದ ಪ್ರಸಿದ್ಧ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ (Neha Singh Rathore), ಪ್ರಧಾನಿ ಮೋದಿ ಸೇರಿದಂತೆ ಹಲವರಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಮಹಿಳಾ ಆಯೋಗ, ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ತಮ್ಮ ಮೇಲೆ ಆಗುತ್ತಿರುವ ಶೋಷನೆಯನ್ನು ಹೇಳಿಕೊಂಡಿದ್ದಾರೆ.

ಗಾಯಕಿ ನೇಹಾ ಅವರನ್ನು ನೀಲಿತಾರೆ ಮಿಯಾ ಖಲೀಫಾಗೆ (Mia Khalifa) ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ. ಅನೇಕರು ಅದನ್ನು ಹಂಚಿಕೊಂಡಿದ್ದಾರೆ. ನೇಹಾ ಮತ್ತು ಮಿಯಾ ನೋಡೋಕೆ ಒಂದೇ ತರಹ ಇದ್ದಾರೆ ಎನ್ನುವ ಕಾರಣಕ್ಕಾಗಿ ಟ್ರೋಲ್ ಮಾಡಲಾಗುತ್ತಿದೆ ಅಂತೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಅವರು ಕೇಳಿಕೊಂಡಿದ್ದಾರೆ.

 

ಕಂಗನಾ ರಣಾವತ್ ಅವರಿಗೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಅವರು ಅವಮಾನಿಸಿದ್ದರು. ಇದನ್ನು ಮಹಿಳಾ ಆಯೋಗ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಪ್ರತಿಕ್ರಿಯೆ ನೀಡಿತ್ತು. ಹಾಗಾಗಿ ಮಹಿಳಾ ಆಯೋಗ ಮತ್ತು ಕೇಂದ್ರ ಸರಕಾರ ಕೇವಲ ಕಂಗನಾ ಅವರನ್ನು ಮಾತ್ರ ಮಹಿಳೆ ಎಂದು ಪರಿಗಣಿಸಿದ್ಯಾ? ಅಥವಾ ನಮ್ಮಂಥವರಿಗೆ ನ್ಯಾಯ ಕೊಡುತ್ತಾ ಎಂದು ಅವರು ಕೇಳಿದ್ದಾರೆ.

Share This Article