65 ಎಕರೆ ಅರಣ್ಯ ಭೂಮಿಯಲ್ಲಿ ಬೆಳೆದಿದ್ದ 1.80 ಲಕ್ಷ ಗಾಂಜಾ ಗಿಡಗಳನ್ನು ನಾಶಪಡಿಸಿದ ಭದ್ರತಾ ಪಡೆ

1 Min Read

ಅಗರ್ತಲ: ತ್ರಿಪುರದ (Tripura) ಸೋನಮುರಾ ಉಪವಿಭಾಗದ ಸಂರಕ್ಷಿತ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ 65 ಎಕರೆಯಲ್ಲಿ ಬೆಳೆಸಲಾಗಿದ್ದ ಸುಮಾರು 1.80 ಲಕ್ಷ ಗಾಂಜಾ ಗಿಡಗಳನ್ನು ಭದ್ರತಾ ಪಡೆಗಳು (Security Forces) ನಾಶಪಡಿಸಿವೆ.

ಕಮಲಾನಗರ, ಕೃಷ್ಣಡೋಲಾ, ದುಲುಂಗಾ ಮತ್ತು ಬಿಜೋಯ್ ನಗರಗಳ ಅರಣ್ಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ದಾಳಿ ನಡೆಸಿವೆ. ಈ ವೇಳೆ 1.80 ಲಕ್ಷ ಪ್ರೌಢ ವ್ಯವಸ್ಥೆ ಗಾಂಜಾ ಸಸಿಗಳು ಪತ್ತೆಯಾಗಿದ್ದು ಅವುಗಳನ್ನು ನಾಶಪಡಿಸಲಾಗಿದೆ. ನಾಶಪಡಿಸಲಾದ ಗಾಂಜಾದ ಮೌಲ್ಯ 27 ಕೋಟಿ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಒನ್‌ ವೇ ಸಂಚಾರದ ವಿರುದ್ಧ ಆಪರೇಷನ್‌ – ಬರೋಬ್ಬರಿ 23 ಸಾವಿರ ಕೇಸ್ ದಾಖಲು

ಜನವರಿ 29 (ಗುರುವಾರ) ರಂದು ತ್ರಿಪುರದಲ್ಲಿ ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿವೆ. ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಮಲನಗರ, ಕೃಷ್ಣಡೋಲ, ದುಲುಂಗ ಮತ್ತು ಬಿಜೋಯ್ ನಗರಗಳಲ್ಲಿನ ಅರಣ್ಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಇತ್ತೀಚೆಗೆ ಮಾದಕ ವಸ್ತುಗಳ ವಿರುದ್ಧ ರಾಜ್ಯದಲ್ಲಿ ಕಾರ್ಯಾಚರಣೆ ತೀವ್ರಗೊಳಿಸಲಾಗುತ್ತಿದೆ.

ದಾಳಿಯಲ್ಲಿ ಸೋನಮುರಾ ಪೊಲೀಸ್ ಠಾಣೆಯ ಘಟಕಗಳಾದ 81 ಬೆಟಾಲಿಯನ್ ಬಿಎಸ್‌ಎಫ್, 5ನೇ, 9ನೇ, 11ನೇ ಮತ್ತು 14ನೇ ಬೆಟಾಲಿಯನ್ ಟಿಎಸ್‌ಆರ್, 14ನೇ ಬೆಟಾಲಿಯನ್ ಮಹಿಳಾ ಟಿಎಸ್‌ಆರ್, 35 ಬೆಟಾಲಿಯನ್ ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ಚಾ.ನಗರ| ಮದುವೆ ಮಂಟಪಕ್ಕೆ ತೆರಳುತ್ತಿದ್ದ ವರನಿಗೆ ಚಾಕು ಇರಿತ

Share This Article