ರಶ್ಮಿಕಾ ಮಂದಣ್ಣಗೆ ಠಕ್ಕರ್- ನ್ಯಾಷನಲ್ ಕ್ರಶ್ ಪಟ್ಟ ಬಾಚಿಕೊಂಡ ತೃಪ್ತಿ ದಿಮ್ರಿ

Public TV
1 Min Read

ಬಾಲಿವುಡ್ ಬ್ಯೂಟಿ ಕ್ವೀನ್ ತೃಪ್ತಿ ಡಿಮ್ರಿ (Triptii Dimri) ಈ ಹೆಸರು ಎಷ್ಟು ಜನಕ್ಕೆ ತಿಳಿದಿತ್ತು? ಆದರೆ ‘ಅನಿಮಲ್’ (Animal) ರಿಲೀಸ್ ಆದ್ಮೇಲೆ ತೃಪ್ತಿಯದ್ದೇ ಹವಾ ಜೋರಾಗಿದೆ. ರಶ್ಮಿಕಾ (Rashmika Mandanna) ಹೀರೋಯಿನ್ ಆಗಿದ್ದರೂ ಪುಟ್ಟ ಪಾತ್ರದಲ್ಲಿ ಬೋಲ್ಡ್ ಆಗಿ ನಟಿಸಿರೋ ತೃಪ್ತಿಯೇ ಹೈಲೈಟ್ ಆಗಿದ್ದಾರೆ. ಹೀಗಾಗಿ ನಯಾ ನ್ಯಾಶನಲ್ ಕ್ರಶ್ ಪಟ್ಟ ತೃಪ್ತಿಗೆ ಹೋಗಿದೆ. ರಶ್ಮಿಕಾಗೆ ಠಕ್ಕರ್‌ ಕೊಟ್ಟು ನ್ಯಾಷನಲ್‌ ಕ್ರಶ್‌ ಪಟ್ಟ ನಟಿ ತೃಪ್ತಿ ಬಾಚಿಕೊಂಡಿದ್ದಾರೆ.

ರಣಬೀರ್ ಕಪೂರ್‌ಗೆ (Ranbir Kapoor) ‘ಅನಿಮಲ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಆದರೆ ತೃಪ್ತಿ ದಿಮ್ರಿ ಅನ್ನೋ ನಯಾ ಹುಡುಗಿಯದ್ದು ಒಂದು ಪಾತ್ರ ಇದೆ ಅನ್ನೋದೇ ರಿಲೀಸ್‌ಗೂ ಮುನ್ನ ರಿವೀಲ್ ಕೂಡ ಆಗಿರಲಿಲ್ಲ. ಆದರೆ ಯಾವಾಗ ‘ಅನಿಮಲ್’ ಸಿನಿಮಾ ಅದ್ಯಾವಾಗ ಎಂಟ್ರಿ ಕೊಡ್ತೋ, ಬಳಿಕ ತೃಪ್ತಿ ದಿಮ್ರಿಯನ್ನ ಫಾಲೋ ಮಾಡೋವ್ರ ಸಂಖ್ಯೆ ಹೆಚ್ಚಾಯ್ತು. ಅಸಲಿಗೆ ತೃಪ್ತಿಯೇ ಅಸಲಿ ನ್ಯಾಶನಲ್ ಕ್ರಶ್ ಎಂಬ ಆಂದೋಲನ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

ಹಾಡಿಲ್ಲ ಹೆಚ್ಚು ದೃಶ್ಯಗಳಿಲ್ಲ ಆದರೂ ರಣಬೀರ್ ಜೊತೆ ತೃಪ್ತಿ ಕೆಮಿಸ್ಟ್ರಿ ಫ್ಯಾನ್ಸ್‌ಗೆ ಹುಚ್ಚು ಹಿಡಿಸಿದೆ. ಪರಿಣಾಮ ತೃಪ್ತಿ ಹವಾ ಜೋರಾಗಿದೆ. ಹೋಗಿ ಬಂದು ಟ್ರೋಲ್ ಆಗುವ ರಶ್ಮಿಕಾಗೆ ಇದೀಗ ಫ್ಯಾನ್ಸ್ ತೃಪ್ತಿಯೇ ನ್ಯಾಷನಲ್ ಕ್ರಶ್ ನೀನಲ್ಲ ಎಂದು ಸಂದೇಶ ರವಾನಿಸಿ ಕಾಲೆಳೆದಿದ್ದಾರೆ. ನಾಯಕಿಯಾಗಿದ್ರೂ ಸೈಡ್‌ಲೈನ್ ಆಗಿರೋ ರಶ್ಮಿಕಾಗೆ ಇದು ಬಯಸದೆ ಬಂದ ಸಂಕಟ. ಇದನ್ನೂ ಓದಿ:ಒಂದೇ ಸಿನಿಮಾದಲ್ಲಿ ಅಪ್ಪ, ಮಗಳು- ‘ಕಾಟೇರ’ ರೈಟರ್ ಆ್ಯಕ್ಷನ್ ಕಟ್

ಸೌತ್‌ನಲ್ಲಿ ಶ್ರೀಲೀಲಾ (Sreeleela) ಠಕ್ಕರ್ ಕೊಡ್ತಿದ್ರೆ, ಬಾಲಿವುಡ್‌ನಲ್ಲಿ ತಮ್ಮದೇ ಚಿತ್ರದ ನಾಯಕಿ ತೃಪ್ತಿ ದಿಮ್ರಿ ಸೆಡ್ಡು ಹೊಡೆಯುತ್ತಿದ್ದಾರೆ. ಒಟ್ನಲ್ಲಿ ‘ಅನಿಮಲ್’ ಸಕ್ಸಸ್ ಆಯ್ತಾಲ್ಲ ಅಂದುಕೊಂಡ್ರೆ ರಶ್ಮಿಕಾ ಮಂದಣ್ಣಗೆ ಹೊಸ ತಲೆನೋವು ಶುರುವಾಗಿದೆ.

Share This Article