ಪತಿಗೆ ಡಿವೋರ್ಸ್‌ ನೀಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಆ್ಯಂಕರ್ ಚೈತ್ರಾ

Public TV
3 Min Read

ನಿರೂಪಕಿ, ಬಿಗ್ ಬಾಸ್ (Bigg Boss Kannada) ಸ್ಪರ್ಧಿ ಚೈತ್ರಾ ವಾಸುದೇವನ್ (Chaitra Vasudevan)  ಅವರು ಇತ್ತೀಚಿಗೆ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌ವೊಂದನ್ನ ಕೊಟ್ಟಿದ್ದರು. 5 ವರ್ಷಗಳ ದಾಂಪತ್ಯಕ್ಕೆ ನಟಿ ಚೈತ್ರಾ ಅವರು ಅಂತ್ಯ ಹಾಡಿದ್ದರು. ತಮ್ಮ ಡಿವೋರ್ಸ್ (Divorce)  ಬಗ್ಗೆ ನಟಿ ಚೈತ್ರಾ ಅವರು ಅಧಿಕೃತವಾಗಿ ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದರು. ಈಗ ತಮ್ಮ ಪತಿಗೆ ಡಿವೋರ್ಸ್ ಕೊಟ್ಟಿದ್ದು ಯಾಕೆ ಎಂದು ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ.

ಚೈತ್ರಾ ವಾಸುದೇವನ್ ಅವರು ತಮ್ಮ ನಿರೂಪಣೆಯ ಮೂಲಕ ಮನೆ ಮಾತಾದ ನಟಿ, ಪಟಪಟ ಮಾತು, ಆ ನಗು, ಆಕೆಯ ಮುದ್ದು ಮುಖ ನೋಡುಗರನ್ನ ಇಂಪ್ರೆಸ್ ಮಾಡಿತ್ತು. ಸದಾ ಒಂದಲ್ಲಾ ಒಂದು ಶೋ ಮೂಲಕ ಅಭಿಮಾನಿಗಳಿಗೆ ರಂಜಿಸೋ ಚೈತ್ರಾ ಅವರ ಬಾಳಲ್ಲಿ ಡಿವೋರ್ಸ್ ಎಂಬ ಬಿರುಗಾಳಿ ಎದ್ದಿದೆ. ಪತಿಗೆ ಡಿವೋರ್ಸ್ ನೀಡಿ ಕೆಲವು ತಿಂಗಳುಗಳು ಕಳೆದಿದೆ.

ಈವೆಂಟ್‌ವೊಂದರಲ್ಲಿ ಚೈತ್ರಾ ಅವರನ್ನ ನೋಡಿ ಉದ್ಯಮಿ ಸತ್ಯ ನಾಯ್ಡು (Sathya Naidu) ಅವರು ಇಷ್ಟಪಟ್ಟು ಹಿರಿಯರನ್ನ ಒಪ್ಪಿಸಿ, 2017ರಲ್ಲಿ ಮದುವೆಯಾದರು. ಕುಂದಾಪುರದ ಹುಡುಗಿ ಚೈತ್ರಾ ಜೊತೆ ಸತ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಕಾರ್ಯಕ್ರಮದ ನಿರೂಪಣೆ, ಬಿಗ್ ಬಾಸ್ ಮನೆಗೆ ಕಾಲಿಟ್ಟ ಚೈತ್ರಾ ಅಭಿಮಾನಿಗಳ ಗಮನ ಸೆಳೆದರು. ಇದನ್ನೂ ಓದಿ:ಶ್ರೀಲೀಲಾಗೆ ಸೆಡ್ಡು ಹೊಡೆದ ವೈಷ್ಣವಿ- ‘ಬೇಬಿ’ ನಾಯಕಿಗೆ ಬಂಪರ್ ಆಫರ್ಸ್

ಆಂಗ್ಲ ಮಾಧ್ಯಮವೊಂದಕ್ಕೆ ಬಿಗ್ ಬಾಸ್ ಚೈತ್ರಾ ಅವರು ತಮ್ಮ ಡಿವೋರ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮತ್ತು ನನ್ನ ಪತಿ ಮಧ್ಯೆ ಅಹಂಕಾರದ ಸಮಸ್ಯೆಯಿಂದ ಬೇರೆಯಾಗಿದ್ದೇವೆ ಎಂದು ಅಂದುಕೊಂಡಿದ್ದಾರೆ. ಆದರೆ ಅದು ಸುಳ್ಳು ಈ ವಿಚಾರವಾಗಿ ನಾವು ಬೇರೆಯಾಗಿದಲ್ಲ. ನಾವಿಬ್ಬರೂ 2017ರಲ್ಲಿ ಮದುವೆಯಾದೆವು, ಕಳೆದ 5 ವರ್ಷಗಳಿಂದ ನಮ್ಮ ನಡುವಿನ ಸಮಸ್ಯೆಯನ್ನ ಸರಿಪಡಿಸಿಕೊಳ್ಳಲು ಪ್ರಯತ್ನಪಟ್ಟಿದ್ವಿ. ಆದರೆ ಅದು ಸಾಧ್ಯವಾಗದ ಕಾರಣ ಯೋಚಿಸಿ, ಇಬ್ಬರ ಸಮ್ಮತಿಯ ಮೇರೆಗೆ ಕೆಲವು ತಿಂಗಳುಗಳ ಹಿಂದೆ ಬೇರೆ ಆಗಿದ್ವಿ ಎಂದು ನಟಿ ಮಾತನಾಡಿದ್ದಾರೆ.

ಈ ಹಿಂದೆ ನನ್ನ ಕೆರಿಯರ್‌ಗೆ ಪತಿ ಕುಟುಂಬದ ಬೆಂಬಲವಿದೆ ಎಂದು ನಟಿ ಹೇಳಿದ್ದರು. ಚೆನ್ನಾಗಿದ್ದ ಸಂಸಾರದಲ್ಲಿ ಅದು ಏನಾಯ್ತೋ ಏನೋ ಈಗ ನಿರೂಪಕಿ ಚೈತ್ರಾ-ಸತ್ಯ ಅವರ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ. ಇಬ್ಬರು ಡಿವೋರ್ಸ್ ಪಡೆದು ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಡಿವೋರ್ಸ್ ಪಡೆದು ಹಲವು ತಿಂಗಳುಗಳ ನಂತರ ನಟಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ಕೆಂಪು ಬಣ್ಣದ ಉಡುಗೆಯಲ್ಲಿ ‌’ಕಾವಾಲಾ’ ಬ್ಯೂಟಿ ಮಿಂಚಿಂಗ್

ಇತ್ತೀಚೆಗೆ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಡಿವೋರ್ಸ್ ವಿಚಾರಗಳನ್ನು ಘೋಷಿಸುತ್ತಿದ್ದಾರೆ. ಇದೀಗ ಚೈತ್ರಾ ಕೂಡ ಅದನ್ನೇ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನುಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಚೈತ್ರಾ ವಾಸುದೇವನ್ ಬರೆದುಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್