ಸ್ವಾತಂತ್ರ್ಯ ದಿನದಂದು ಕುಡಿಯಿರಿ ಟ್ರೈ ಕಲರ್ ಸ್ಮೂದಿ

Public TV
2 Min Read

ದೇಶದ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ಇಂದಿನ ಈ ವಿಶೇಷ ಸಂದರ್ಭದಲ್ಲಿ ನಿಮಗಾಗಿ ವಿಶೇಷ ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಈ ರೆಸಿಪಿ ಮಾಡಲು ತುಂಬಾ ಸುಲಭವಾಗಿದ್ದು, ಆರೋಗ್ಯಕರವೂ ಹೌದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಟ್ರೈ ಕಲರ್ ಸ್ಮೂದಿಯನ್ನು ಯಾವ ರೀತಿಯಾಗಿ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ. ಹೆಸರೇ ಸೂಚಿಸುವಂತೆ ಈ ಸ್ಮೂದಿ ಮೂರು ಬಣ್ಣವನ್ನು ಹೊಂದಿರುತ್ತದೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಹೀಗೆ ಮಾಡಿ ಸಿಂಪಲ್ ಪೀನಟ್ ಬಟರ್‌ನ ಮಿಠಾಯಿ

ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಕ್ಯಾರೆಟ್ – ಒಂದು
ಜೇನು ತುಪ್ಪ – ಅಗತ್ಯಕ್ಕೆ ತಕ್ಕಷ್ಟು
ಪಾಲಕ್ ಸೊಪ್ಪು – ಸ್ವಲ್ಪ
ಹಸಿರು ದ್ರಾಕ್ಷಿ – ಸ್ವಲ್ಪ
ಹೆಚ್ಚಿದ ಹಸಿರು ಸೇಬು – ಒಂದು
ನೀರು – ಅಗತ್ಯಕ್ಕೆ ತಕ್ಕಷ್ಟು
ಹೆಚ್ಚಿದ ಬಾಳೆಹಣ್ಣು – ಒಂದು
ಕುದಿಸಿದ ಹಾಲು – ಒಂದು ಕಪ್

ಮಾಡುವ ವಿಧಾನ:
* ಮೊದಲಿಗೆ ಒಂದು ಮಿಕ್ಸಿ ಜಾರಿನಲ್ಲಿ ಹೆಚ್ಚಿದ ಕ್ಯಾರೆಟ್ ಅನ್ನು ಹಾಕಿ ಅದಕ್ಕೆ ಸ್ವಲ್ಪ ನೀರು ಮತ್ತು ಸ್ವಲ್ಪ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ರುಬ್ಬಿಕೊಂಡು ಒಂದು ಗ್ಲಾಸ್‌ನಲ್ಲಿ ಹಾಕಿ ಬದಿಗಿಡಿ.
* ಬಳಿಕ ಅದೇ ಮಿಕ್ಸಿ ಜಾರಿಗೆ ಪಾಲಕ್ ಎಲೆ, ಹಸಿರು ದ್ರಾಕ್ಷಿ ಹಾಗೂ ಹಸಿರು ಸೇಬನ್ನು ಹಾಕಿ ಅದಕ್ಕೆ ಸ್ವಲ್ಪ ನೀರು ಮತ್ತು ಜೇನುತುಪ್ಪವನ್ನು ಸೇರಿಸಿಕೊಂಡು ರುಬ್ಬಿಕೊಳ್ಳಿ. ಈಗ ಇದನ್ನು ಬೇರೊಂದು ಗ್ಲಾಸ್‌ನಲ್ಲಿ ತೆಗೆದಿಡಿ.
* ನಂತರ ಮತ್ತೊಮ್ಮೆ ಮಿಕ್ಸಿ ಜಾರಿಗೆ ಹೆಚ್ಚಿದ ಬಾಳೆಹಣ್ಣು ಹಾಕಿ ಅದಕ್ಕೆ ಸ್ವಲ್ಪ ಹಾಲು ಮತ್ತು ಜೇನುತುಪ್ಪವನ್ನು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.
* ಈಗ ಒಂದು ದೊಡ್ಡ ಗ್ಲಾಸ್ ತೆಗೆದುಕೊಂಡು ಅದಕ್ಕೆ ಮೊದಲಿಗೆ ಪಾಲಕ್, ದ್ರಾಕ್ಷಿ ಹಾಗೂ ಸೇಬು ಹಣ್ಣಿನ ರಸವನ್ನು ಹಾಕಿಕೊಳ್ಳಿ.
* ಬಳಿಕ ಒಂದು ಚಮಚದ ಸಹಾಯದಿಂದ ಬಾಳೆಹಣ್ಣಿನ ರಸವನ್ನು ಅದರ ಮೇಲೆ ನಿಧಾನವಾಗಿ ಹಾಕಿಕೊಳ್ಳಿ. ಹಾಕುವ ವೇಳೆ ಒಂದು ಬಣ್ಣ ಇನ್ನೊಂದು ಬಣ್ಣದೊಂದಿಗೆ ಮಿಕ್ಸ್ ಆಗದಂತೆ ನೋಡಿಕೊಳ್ಳಿ. ಅದಕ್ಕಾಗಿ ಮಿಶ್ರಣಗಳನ್ನು ಸ್ವಲ್ಪ ದಪ್ಪವಾಗಿ ರುಬ್ಬಿಕೊಳ್ಳಿ.
* ಕೊನೆಯಲ್ಲಿ ಅದರ ಮೇಲೆ ಕ್ಯಾರೆಟ್ ಮಿಶ್ರಣವನ್ನು ನಿಧಾನವಾಗಿ ಹಾಕಿ. ಟ್ರೈ ಕಲರ್ ಸ್ಮೂದಿ ಕುಡಿಯಲು ರೆಡಿ. ಇದನ್ನೂ ಓದಿ: ರುಚಿರುಚಿಯಾಗಿ ಮಾಡಿ ಚಿಲ್ಲಿ ಗಾರ್ಲಿಕ್ ಪರೋಟ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್