ದೆಹಲಿಯಲ್ಲಿ ಭೂಕಂಪನ ಅನುಭವ – 3.2 ತೀವ್ರತೆ ದಾಖಲು

Public TV
0 Min Read

ನವದೆಹಲಿ: ದೆಹಲಿ ಎನ್‌ಸಿಆರ್‌ನಲ್ಲಿ (Delhi NCR) ಇಂದು ಮುಂಜಾನೆ (ಜು.22) ಭೂಕಂಪನದ ಅನುಭವವಾಗಿದೆ. ಯಾವುದೇ ಜೀವಹಾನಿ, ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಭೂಕಂಪನದ ಕೇಂದ್ರಬಿಂದು ಹರಿಯಾಣದ ಫರಿದಾಬಾದ್ ಆಗಿದೆ. ರಿಕ್ಟರ್ ಮಾಪಕದಲ್ಲಿ ಬೆಳಿಗ್ಗೆ 6 ಗಂಟೆಗೆ, 3.2 ತೀವ್ರತೆಯ ಕಂಪನ ದಾಖಲಾಗಿದೆ. ಭೂಮಿಯ ಮೇಲ್ಮೈಯಿಂದ 5 ಕಿ.ಮೀ ಕೆಳಗೆ ಈ ಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

ಜು.11 ರಂದು ಹರಿಯಾಣದಲ್ಲಿ (Haryana) 3.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಪರಿಣಾಮ ದೆಹಲಿಯಲ್ಲಿ ಸಹ (Delhi Earthquake) ಭೂಕಂಪನದ ಅನುಭವವಾಗಿತ್ತು.

Share This Article