ಕೆಜಿಎಫ್ ಶೂಟಿಂಗ್ ನಡೆದ ಬಂಜರು ಭೂಮಿಗೆ ಮತ್ತೆ ಜೀವ ನೀಡುತ್ತಿದೆ ಹೊಂಬಾಳೆ ಫಿಲಂಸ್

Public TV
1 Min Read

ಕೋಲಾರ: ಕೆಜಿಎಫ್ ಚಾಪ್ಟರ್ 2 ಸಿನಿಮಾ ಚಿತ್ರೀಕರಣ ನಡೆದ ಸೈನೈಡ್ ಬೆಟ್ಟದಲ್ಲಿ ಹೊಂಬಾಳೆ ಫಿಲಂಸ್ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಕೆಜಿಎಫ್ ಚಾಪ್ಟರ್ 2 ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಕೆಜಿಎಫ್ ನಗರದಲ್ಲಿ ಬರಡು ಭೂಮಿಯಾಗಿದ್ದ ಸೈನೈಡ್ ಗುಡ್ಡದಲ್ಲಿ ಸಸಿ ನೆಡಲು ಆರಂಭಿಸಿದೆ.

ಸೈನೈಡ್ ಗುಡ್ಡದಲ್ಲಿ ಅರಣ್ಯ ಬೆಳೆಸುವ ಮೂಲಕ ಅಲ್ಲಿನ ನಿವಾಸಿಗಳಿಗೆ ಸ್ವಚ್ಛ ಪರಿಸರ ನೀಡುವ ಉದ್ದೇವನ್ನು ಹೊಂಬಾಳೆ ಫಿಲಂಸ್ ಹೊಂದಿದ್ದು, ಹೊಂಬಾಳೆ ಫಿಲಂಸ್ ವೀಡಿಯೋ ಅಪ್ಲೋಡ್ ಮಾಡಿದೆ. ಈ ವೀಡಿಯೋ ನೋಡಿದ ವೀಕ್ಷಕರು ಸಖತ್ ಖುಷಿ ಪಟ್ಟಿದ್ದು, ಈ ಕೆಲಸಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್

ಕೆಜಿಎಫ್ ಸಿನಿಮಾ ಚಿತ್ರೀಕರಣ ನಡೆದ ಜಾಗದಲ್ಲಿ ಹೊಂಬಾಳೆ ಫಿಲಂಸ್ ಹಾಗೂ ಅರಣ್ಯ ಇಲಾಖೆ ಜೊತೆಗೂಡಿ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಈ ಬಂಜರು ಭೂಮಿಗೆ ಮತ್ತೆ ಜೀವ ನೀಡಲಾಗುತ್ತಿದೆ. ಇದಕ್ಕೆ ಕೋಲಾರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಈ ಕಾರ್ಯಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದೆ.

ಪ್ರಕೃತಿಯ ಮೇಲಿನ ಕಾಳಜಿ ಪ್ರಕೃತಿಗೆ ಮರಳಿ ನೀಡುವುದರಲ್ಲಿ ಹಾಗೂ ಅದನ್ನು ಮುಂದಿನ ಪೀಳಿಗೆಗೋಸ್ಕರ ಕಾಪಾಡುವುದರಲ್ಲಿದೆ ಎಂದು ನಾವು ನಂಬುತ್ತೇವೆ ಹೊಂಬಾಳೆ ಫಿಲಂಸ್ ಹೇಳಿದೆ. ಇದನ್ನೂ ಓದಿ: ಭಾರತದಲ್ಲಿ ಆರಂಭ, ಅಮೆರಿಕದಲ್ಲಿ ಕೊನೆ – ಸ್ಪೆಷಲ್ ಆಗಿ ಹುಟ್ಟುಹಬ್ಬ ಆಚರಿಸಿದ ರಮಿಕಾ ಸೇನ್‍

ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಸುದ್ದಿಯಾಗಿತ್ತು. ಈಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೇಲೆ ಪ್ರೇಕ್ಷಕರಲ್ಲಿ ಭಾರೀ ನೀರಿಕ್ಷೆಯಿದೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಕೇಳಿದ್ದು, ರಾಕಿಂಗ್ ಸ್ಟಾರ್ ಯಶ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು 2022ರ ಏಪ್ರಿಲ್ 14 ರಂದು ಬಹುಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *