ಯುವಕನ ಕೈ, ಕಾಲುಗಳ ಮೇಲೆ ಬೆಳೆಯುತ್ತಿದೆ ತೊಗಟೆ

Public TV
2 Min Read

– 25 ಶಸ್ತ್ರ ಚಿಕಿತ್ಸೆ ಬಳಿಕವೂ ಗುಣಮುಖನಾಗದ ಟ್ರೀ ಮ್ಯಾನ್

ಢಾಕಾ: ಕೈ ಹಾಗೂ ಕಾಲುಗಳ ಮೇಲೆ ಮರದ ತೊಗಟೆ ಬೆಳೆಯುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಂಗ್ಲಾದೇಶದ ಯುವಕ, ಟ್ರೀ ಮ್ಯಾನ್ ಮತ್ತೆ ಆಸ್ಪತ್ರೆ ಸೇರಿದ್ದಾನೆ.

ಬಾಂಗ್ಲಾದೇಶದ ಹಳ್ಳಿಯೊಂದರ ಅಬುಲ್ ಬಜಂದರ್ (28) ಕಳೆದ ಎರಡು ದಶಕಗಳಿಂದ Epidermodysplasia Verruciformis ಎಂಬ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರೆ. ಇದರಿಂದಾಗಿ ಅವರ ಮುಂಗೈ ಹಾಗೂ ಮುಂಗಾಲು ಭಾಗದಲ್ಲಿ ತೊಗಟೆ ಬೆಳೆಯುತ್ತಿದೆ.

ವೈದ್ಯ ಲೋಕಕ್ಕೆ ಸವಾಲಾಗಿದ್ದ ತೊಗಟೆಯನ್ನು ಮೂರು ವರ್ಷಗಳ ಹಿಂದೆ ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಆತನಿಗೆ 2016ರಿಂದ ಒಟ್ಟು 25 ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆದರೂ ಬಜಂದರ್ ಗೆ ಕಾಣಿಸಿಕೊಂಡ ಕಾಯಿಲೆ ಕಡಿಮೆಯಾಗಿಲ್ಲ.

ಇದೊಂದು ವಿರಳ ಕೇಸ್ ಆಗಿದ್ದು, 2017ರಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ ಅದಕ್ಕೆ ಪೂರಕ ಚಿಕಿತ್ಸೆ ಮುಂದುವರಿಸಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪ್ರಗತಿ ನಡೆಸಿದ್ದೆವು. ಆದರೆ ಯುವಕ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಒಪ್ಪದೇ ತಮ್ಮ ಗ್ರಾಮಕ್ಕೆ ವಾಪಾಸ್ ಹೋಗಿಬಿಟ್ಟ. ಇದಾದ ಬಳಿಕ ಆತನಿಗೆ ತಿಳಿಸಿ ಆಸ್ಪತ್ರೆಗೆ ಬರುವಂತೆ ನಾವು ಕೇಳಿಕೊಂಡರೂ ಬಂದಿರಲಿಲ್ಲ ಎಂದು ಢಾಕಾ ಮೆಡಿಕ್ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ನಿರ್ದೇಶದಕ ಡಾ.ಸಮಂತ್ ಲಾಲ್ ಸೇನ್ ತಿಳಿಸಿದ್ದಾರೆ.

ಈ ಕಾಯಿಲೆ ವಿಎಚ್‍ಪಿ ಇನಫೆಕ್ಷನ್ ನಿಂದ ಬರುತ್ತದೆ. ಆದರೆ ಇದು ದೊಡ್ಡ ಪ್ರಮಾಣದಲ್ಲಿ ಹರಡುವುದು ವಿರಳ. ಇಂತಕ ಕಾಯಿಲೆಯಿಂದ ಬಳಲುತ್ತಿದ್ದ ಬಜಂದರ್ ಗೆ ಸ್ವಂತ ಕೈಗಳಿಂದ ಊಟ, ಬ್ರಶ್, ಸ್ನಾನ ಸೇರಿದಂತೆ ನಿತ್ಯ ಕೆಲಸಗಳನ್ನು ಮಾಡಲು ಬರುತ್ತಿರಲಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿ, ತೊಗಟೆಯನ್ನು ತೆಗೆಯಲಾಗಿತ್ತು. ಚಿಕಿತ್ಸೆಯ ಬಳಿಕ ಬಜಂದರ್ ಚೇತರಿಸಿಕೊಂಡಿದ್ದ ಎಂದರು.

ಅಬುಲ್ ಬಜಂದರ್ ತನ್ನ ತಾಯಿಯ ಜೊತೆಗೆ ಭಾನುವಾರ ಆಸ್ಪತ್ರೆಗೆ ಮರಳಿದ್ದಾನೆ. ಆತನ ಮುಂಗೈ ಹಾಗೂ ಮುಂಗಾಲು ಭಾಗದಲ್ಲಿ ತೊಗಟೆ ಪುನಃ ಬೆಳೆಯಲು ಆರಂಭಿಸಿದೆ. ಇದಿಂದಾಗಿ ಮುಂದಿನ ದಿನಗಳಲ್ಲಿ ಐದರಿಂದ ಆರು ಬಾರಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗುವ ಅನಿವಾರ್ಯತೆ ಎದುರಾಗಲಿದೆ ಎಂದು ಸಮಂತ್ ಲಾಲ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *