ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ 1 ಕೆ.ಜಿ ಚಿನ್ನಾಭರಣಗಳ ನಿಧಿ ಪತ್ತೆಯಾಗಿದೆ.
ಗಂಗವ್ವ ರಿತ್ತಿ ಎಂಬುವವರ ಮನೆ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಅಂದಾಜು 1 ಕೆ.ಜಿ ತೂಕದ ಚಿನ್ನಾಭರಣಗಳು ದೊರೆತಿದೆ ಎನ್ನಲಾಗಿದೆ. ಇದನ್ನೂ ಓದಿ:ದುಬೈನಲ್ಲಿ ಬಿಡುಗಡೆ ಆಯ್ತು ವೈಲ್ಡ್ ಟೈಗರ್ ಸಫಾರಿ ಟೀಸರ್
1 ಹಿತ್ತಾಳೆ ತಂಬಿಗೆ, 2 ಸರ, 18 ಬಿಲ್ಲೆಗಳು, ಕಾಲ್ಗೆಜ್ಜೆ, ಕಡ ಇತ್ಯಾದಿ ವಡವೆಗಳು ಪತ್ತೆಯಾಗಿವೆ. ಸ್ಥಳಕ್ಕೆ ಎಸ್.ಪಿ ರೋಹನ್ ಜಗದೀಶ್, ಎಸಿ ಗಂಗಪ್ಪ, ಪುರಾತತ್ವ ಇಲಾಖೆ ಸಿಬ್ಬಂದಿಗಳು, ಲಕ್ಕುಂಡಿ ಪ್ರಾಧಿಕಾರದ ಅಧಿಕಾರಿಗಳು, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊರೆತ ಚಿನ್ನಾಭರಣಗಳು ಯಾರ ಕಾಲದ್ದು, ಎಷ್ಟು ಮೌಲ್ಯದು ಎಂದು ತನಿಖೆ ಆರಂಭಿಸಿದ್ದಾರೆ.

