ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ – ಸಾರಿಗೆ ಸಂಘಟನೆಯಿಂದ ಅನಿರ್ಧಿಷ್ಟಾವಧಿ ಉಪವಾಸ ಧರಣಿ

By
1 Min Read

ಬೆಂಗಳೂರು: ಸಮಾನ ವೇತನ, ಕಾರ್ಮಿಕ ಸಂಘಟನೆಗಳ ಚುನಾವಣೆ, ವಜಾಗೊಂಡ ನೌಕರರ ಮರು ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ಸಂಘಟನೆ ಅನಿರ್ಧಿಷ್ಟಾವಧಿ ಉಪವಾಸ ಧರಣಿ ನಡೆಸಲು ಮುಂದಾಗಿದೆ.ಇದನ್ನೂ ಓದಿ: ಸತತ 7 ದಿನ, 170 ಗಂಟೆ ಭರತನಾಟ್ಯ – ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಮಂಗಳೂರಿನ ರೆಮೋನಾ ಪಿರೇರಾ

ಇಂದು (ಜು.29) ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನಿಗಮಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟಗಳು ಸತ್ಯಾಗ್ರಹಕ್ಕೆ ಮುಂದಾಗಿವೆ. ಹಿಂಬಾಕಿ, ಸಮಾನ ವೇತನ, ಕಾರ್ಮಿಕ ಸಂಘಟನೆಗಳ ಚುನಾವಣೆ, ವಜಾಗೊಂಡ ನೌಕರರ ಮರು ನೇಮಕ ಆಗ್ರಹಿಸಿ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಈಗಾಗಲೇ ಸಾರಿಗೆ ಸಂಘಟನೆಯ ಒಂದು ಬಣ ಆ.5ರಿಂದ ಬಸ್ ನಿಲ್ಲಿಸಿ ಹೋರಾಟ ಮಾಡುವುದಾಗಿ ಕರೆ ಕೊಟ್ಟಿದೆ.

ಸೋಮವಾರ (ಜು.28) ನಡೆದ ಕಾರ್ಮಿಕ ಇಲಾಖೆ ಆಯುಕ್ತರ ಸಭೆಯಲ್ಲಿ ಸಾರಿಗೆ ನೌಕರರ ಮುಖಂಡರು, ಆ.5ರಂದು ಕರೆ ನೀಡಿರುವ ಸಾರಿಗೆ ಮುಷ್ಕರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಪಟ್ಟು ಹಿಡಿದಿದ್ದಾರೆ. ಸಭೆ ಬಳಿಕ ಸಾರಿಗೆ ಇಲಾಖೆ ಹಾಗೂ ಸಾರಿಗೆ ಸಚಿವರಿಗೆ ಕಾರ್ಮಿಕ ಇಲಾಖೆಯಿಂದ ಮಾಹಿತಿ ನೀಡಿದ್ದು, ಮತ್ತೆ ಆ.2ಕ್ಕೆ ಮತ್ತೊಂದು ಹಂತದ ಸಭೆ ನಡೆಸಲಿದೆ ಎಂದು ತಿಳಿಸಿದೆ. ಒಂದು ವೇಳೆ ಆ.2ಕ್ಕೆ ಅಂತಿಮ ನಿರ್ಧಾರವಾಗದಿದ್ದರೆ ಹೋರಾಟ ಶತಸಿದ್ಧ ಎಂದು ಸಾರಿಗೆ ಮುಖಂಡರು ತಿಳಿಸಿದ್ದಾರೆ.ಇದನ್ನೂ ಓದಿ:ಶಿರಡಿಗೆ ಹೋಗಿದ್ದಾಗ ಕೃಷಿ ಅಧಿಕಾರಿ ಮನೆ ಬೀಗ ಮುರಿದು ಕಳ್ಳತನ: 26 ಲಕ್ಷದ ಚಿನ್ನಾಭರಣ ಕದ್ದು ಪರಾರಿ

Share This Article