ಆಪರೇಷನ್ ಸಮಯದಲ್ಲೇ ಡ್ರೋನ್ ಮೂಲಕ ಟಿಶ್ಯೂ ಮಾದರಿಯ ಸಾಗಾಟ – ಮಣಿಪಾಲದಲ್ಲಿ ಮೊದಲ ಪ್ರಯೋಗ ಯಶಸ್ವಿ

Public TV
2 Min Read

– ಕಾರ್ಕಳದ ಡಾ ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಮೊದಲ ಮಾದರಿ ರವಾನೆ

ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಡ್ರೋನ್ (Drone) ಮೂಲಕ ಬಹು ಅಗತ್ಯ ವೈಮಾನಿಕ ಆಧಾರಿತ ಆರೋಗ್ಯ ವಿತರಣಾ ವ್ಯವಸ್ಥೆಯ ಯೋಜನೆಯನ್ನು ಜಂಟಿಯಾಗಿ ಉದ್ಘಾಟಿಸಲಾಯಿತು. ಕರ್ನಾಟಕದ ಪೆರಿಫೆರಲ್ ಮತ್ತು ಟರ್ಷಿಯರಿ ಕೇರ್ ಆಸ್ಪತ್ರೆಗಳ ನಡುವೆ ಆಂಕೊಪಾಥೋಲಾಜಿಕಲ್ ಮಾದರಿಗಳನ್ನು (Sample) ಸಾಗಿಸಲು ಡ್ರೋನ್‌ಗಳನ್ನು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ.

ಫ್ರೋಜನ್ ಮಾದರಿಗಳಂತಹ (ಸ್ಯಾಂಪಲ್) ವಸ್ತುಗಳನ್ನು ದೂರದ ಸ್ಥಳಗಳ ಬಾಹ್ಯ ಆಸ್ಪತ್ರೆಗಳಿಂದ ಟರ್ಷಿಯರಿ ಕೇರ್ ಆಸ್ಪತ್ರೆಗಳಿಗೆ ವೈಮಾನಿಕ ವಿಧಾನಗಳನ್ನು ಬಳಸಿಕೊಂಡು ವರ್ಗಾಯಿಸುವ ಕಾರ್ಯಸಾಧ್ಯತೆಯನ್ನು ನಿರ್ಣಯಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶ. ಈ ಪ್ರಯತ್ನವು ಶಸ್ತçಚಿಕಿತ್ಸಕರು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಮಾದರಿಗಳನ್ನು ಪರೀಕ್ಷಿಸಿ ಅಗತ್ಯವಿರುವ ಕಾರ್ಯವಿಧಾನಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ದಿನೇಶ್ ಗುಂಡುರಾವ್ ಮನೆ ಅಂದ್ರೆ ಅದು ಕಾಂಗ್ರೆಸ್‌ ಮನೆ : ಅರ್ಧ ಪಾಕಿಸ್ತಾನ ಹೇಳಿಕೆಗೆ ಯತ್ನಾಳ್‌ ಸಮರ್ಥನೆ

ಮಾನವರಹಿತ ವೈಮಾನಿಕ ವಾಹನಗಳು, ಸಾಮಾನ್ಯವಾಗಿ ಡ್ರೋನ್‌ಗಳು ಎಂದು ಕರೆಯಲ್ಪಡುತ್ತವೆ. ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಭಾರತದಲ್ಲಿ ಗ್ರಾಮೀಣ ಪ್ರದೇಶಗಳಿಂದ ಇಂಟ್ರಾ ಆಪರೇಟಿವ್ ಮಾದರಿ (ಸ್ಯಾಂಪಲ್) ಸಾರಿಗೆಯ ಕೊರತೆಯನ್ನು ಇವುಗಳು ನೀಗಿಸುತ್ತವೆ. ಈ ಯೋಜನೆಯು ತ್ವರಿತ ಸಾರಿಗೆ ಉದ್ದೇಶಕ್ಕಾಗಿ ಡ್ರೋನ್‌ಗಳನ್ನು ಬಳಸಿಕೊಳ್ಳುವ ಕಾರ್ಯಸಾಧ್ಯತೆ, ಉಪಯುಕ್ತತೆ ಮತ್ತು ವೆಚ್ಚ-ಪರಿಣಾಮಕಾರಿತ್ವವನ್ನು ಅನ್ವೇಷಿಸಲು ಪ್ರಯತ್ನಿಸುತ್ತದೆ. ಇದನ್ನೂ ಓದಿ: ಸಿಬಿಐಗೆ ಸಲ್ಲಿಸಿದ ದಾಖಲೆ ನಮಗೂ ನೀಡಿ – ಡಿಕೆಶಿಗೆ ಲೋಕಾಯುಕ್ತದಿಂದ ನೋಟಿಸ್‌

ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಮಾದರಿಗಳನ್ನು ತ್ವರಿತವಾಗಿ ಸಾಗಿಸಬಹುದು. ಶಸ್ತçಚಿಕಿತ್ಸಾ ವಿಧಾನಗಳ ಸಮಯದಲ್ಲಿ ಫ್ರೋಜನ್ ಮಾದರಿಗಳ ಪರೀಕ್ಷೆ ಮೂಲಕ ಸುಧಾರಿತ ರೋಗನಿರ್ಣಯಗಳಿಗೆ ತಕ್ಷಣದ ಪ್ರವೇಶವನ್ನು ಒದಗಿಸುತ್ತದೆ. ಈ ಯೋಜನೆಯು ಯಶಸ್ವಿಯಾದರೆ ಈ ಸಂಶೋಧನೆಯು ಗ್ರಾಮೀಣ ಆಸ್ಪತ್ರೆಗಳು ಮತ್ತು ಪ್ರಯೋಗಾಲಯ ಸೌಲಭ್ಯಗಳ ನಡುವೆ ಸಂಪರ್ಕವನ್ನು ಸ್ಥಾಪಿಸುವ ಮೂಲಕ ಆರೋಗ್ಯ ವಿತರಣೆಯಲ್ಲಿ ಕ್ರಾಂತಿಗೊಳಿಸಬಹುದು. ಇದರಿಂದಾಗಿ ಭೌಗೋಳಿಕವಾಗಿ ಪ್ರವೇಶಿಸಲಾಗದ ಪ್ರದೇಶಗಳಲ್ಲಿ ರೋಗಿಗಳಿಗೆ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸುಗಮಗೊಳಿಸುತ್ತದೆ. ಇದನ್ನೂ ಓದಿ: ಕ್ಷೇತ್ರದಲ್ಲಿ ಭಯದ ವಾತಾವರಣವಿದ್ದರೂ ಜನರಿಗೆ ಎದುರಿಸುವ ಶಕ್ತಿಯಿದೆ: ಸಿಎನ್‌ ಮಂಜುನಾಥ್‌

ಡ್ರೋನ್ ಯೋಜನೆಯನ್ನು ಉದ್ಘಾಟಿಸಿದ ಡಾ. ರಾಜೀವ್ ಬಹ್ಲ್, ಆರೋಗ್ಯ ರಕ್ಷಣೆಯ ವಿತರಣಾ ಉಪಕ್ರಮದ ನವೀನ ವಿಧಾನವನ್ನು ಶ್ಲಾಘಿಸಿದರು. ವಿಶೇಷವಾಗಿ ಕಡಿಮೆ ಸಾರಿಗೆ ವ್ಯವಸ್ಥೆಯುಳ್ಳ ಗ್ರಾಮೀಣ ಪ್ರದೇಶಗಳಲ್ಲಿ ಮಾದರಿಗಳನ್ನು (ಸ್ಯಾಂಪಲ್) ಸಾಗಿಸಲು ಇರುವ ಸಾರಿಗೆ ತೊಡಕುಗಳು ಮತ್ತು ಈ ಯೋಜನೆಯ ಮೂಲಕ ರೋಗನಿರ್ಣಯ ಸೇವೆಗಳನ್ನು ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಇದನ್ನೂ ಓದಿ: ಗ್ಯಾರಂಟಿ ಹೆಸರು ಹೇಳಿಕೊಂಡು ಹೋಗುವ ಶಾಸಕರಿಗೆ ಜನ ತಟ್ಟುತ್ತಾರೆ: ಗೋವಿಂದ ಕಾರಜೋಳ

Share This Article