– ಡ್ಯೂಟಿ ಮಾಡಿಲ್ಲ ಅಂದ್ರೆ ಸಂಬಳ ಕೊಡಲ್ಲ
– ಅಗತ್ಯಬಿದ್ದರೆ ವಾರದ ರಜೆಗಳೂ ಕಟ್
ಬೆಂಗಳೂರು: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆ.5 ರಿಂದ ರಾಜ್ಯಾದ್ಯಾಂತ ಸಾರಿಗೆ ನೌಕರರು (Transport Employees) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಸಾರಿಗೆ ಇಲಾಖೆ ನೌಕರರಿಗೆ ಬಿಗ್ ವಾರ್ನಿಂಗ್ ಕೊಟ್ಟಿದೆ. ಆ.4ರಿಂದಲೇ ಅನ್ವಯವಾಗುವಂತೆ ಅನಿರ್ದಿಷ್ಟಾವಧಿವರೆಗೆ ಸಾರಿಗೆ ನೌಕರರ ರಜೆಯನ್ನ ರದ್ದುಗೊಳಿಸಿ ಸಾರಿಗೆ ಇಲಾಖೆ (Karnataka Transport Department) ಸುತ್ತೋಲೆ ಹೊರಡಿಸಿದೆ.
ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ, ಉಳಿಯದ ಯಾವುದೇ ರೀತಿಯ ರಜೆಗಳನ್ನು ಮಂಜೂರು ಮಾಡದಂತೆ ಆಯಾ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದೆ, ಅಗತ್ಯಬಿದ್ದರೆ ವಾರದ ರಜೆ ಕೂಡ ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ. ಜೊತೆಗೆ ಇಂದಿನಿಂದಲೇ ಜಾರಿಗೆ ಬರುವಂತೆ ಮುಷ್ಕರದ ಅವಧಿಯಲ್ಲಿ ಕೆಲಸಕ್ಕೆ ಗೈರಾಗುವ ನೌಕರರ ವೇತನವನ್ನೂ ಕಡಿತಗೊಳಿಸುವುದಾಗಿ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ದಸರಾ ಶುರು ಮಾಡಿದ್ದು ಟಿಪ್ಪು ಅಂತ ಹೇಳ್ಬಿಡಿ: ಮಹದೇವಪ್ಪ ವಿರುದ್ಧ ಪ್ರತಾಪ್ ಸಿಂಹ ಕಿಡಿ
ಸಾರಿಗೆ ಇಲಾಖೆ ಸುತ್ತೋಲೆಯಲ್ಲಿ ಏನಿದೆ?
* ಆಗಸ್ಟ್ 4ರಿಂದಲೇ ಜಾರಿಗೆ ಬರುವಂತೆ ಮುಷ್ಕರದ ಅವಧಿಯಲ್ಲಿ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು.
* ಆ.4ರಿಂದಲೇ ಜಾರಿಗೆ ಬರುವಂತೆ ಅನಿವಾರ್ಯ ಸಂದರ್ಭ ಹೊರತುಪಡಿಸಿ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು.
* ಆ.4ರಿಂದ ಜಾರಿಗೆ ಬರುವಂತೆ ಮುಷ್ಕರದ ಅವಧಿಯಲ್ಲಿ ಕೆಲಸಕ್ಕೆ ಗೈರು ಹಾಜರಾಗುವ ನೌಕರರ ವಿರುದ್ಧ ʻಕೆಲಸ ಮಾಡದಿದ್ದಾಗ ವೇತನವಿಲ್ಲʼ ಎಂಬ ತತ್ವದ ಪ್ರಕಾರ ಕ್ರಮ ಕೈಗೊಳ್ಳುವುದು.
* ಈ ಸೂಚನೆಗಳು ವಾರದ ರಜೆ ಮತ್ತು ಧೀರ್ಘಾವಧಿ ರಜೆಯಲ್ಲಿರುವ ನೌಕರರಿಗೆ ಅನ್ವಯಿಸುವುದಿಲ್ಲ. ಆದ್ರೆ ಅನಿವಾರ್ಯ ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ ನೌಕರರ ವಾರದ ರಜೆಯನ್ನೂ ರದ್ದುಗೊಳಿಸಿ ಕರ್ತವ್ಯದ ಮೇಲೆ ನಿಯೋಜಿಸುವುದು.
* ಇಂದು (ಆ.4) ಮತ್ತು ನಂತರದ ಮುಷ್ಕರದ ದಿನಗಳಂದು ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ಪಟ್ಟಿಯಲ್ಲಿ ದಿನವಹಿ/ ಘಟಕವಾರು/ ವರ್ಗಾವಾರು ಸಿದ್ಧಪಡಿಸಿ, ಕೆಲಸ ಮಾಡದಿದ್ದ ದಿನಗಳ ವೇತನ ಕಡಿತಗೊಳಿಸುವುದು. ಅಲ್ಲದೇ, ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದನ್ವಯ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ನಾಲ್ಕು ನಿಗಮಗಳಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಇದನ್ನೂ ಓದಿ: ನಾಳೆಯಿಂದ ರಸ್ತೆಗಿಳಿಯಲ್ಲ ಬಸ್? – ಇಂದು ಸಿಎಂ ಸಭೆ, ಖಾಸಗಿ ಬಸ್‌ಗಳನ್ನ ರಸ್ತೆಗಿಳಿಸಲು ಜಿಲ್ಲಾಡಳಿತ ಕ್ರಮ