– ಸಾರಿಗೆ ನಿಗಮದ ನೌಕರರ ಮಕ್ಕಳಿಂದ ಮನವಿ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರನ್ನು, ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಸಾರಿಗೆ ನೌಕರರ ಬಹುದಿನಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಡಿ.27 ರಂದು ಬೆಂಗಳೂರಲ್ಲಿ ಭಿತ್ತಿಪತ್ರವನ್ನು ಬೃಹತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಸರ್ಕಾರ ಈ ಬಗ್ಗೆ ವರದಿ ಸಲ್ಲಿಸಲು ಸಮಿತಿ ರಚಿಸಿದ್ದರೂ ಇದುವರೆಗೆ ಯಾವುದೇ ಉತ್ತರ ಸರ್ಕಾರದಿಂದ ಬಂದಿಲ್ಲ. ಹೀಗಾಗಿ ಸರ್ಕಾರದ ಕಲ್ಲೆದೆಯನ್ನು ಕರಗಿಸಲು ಸಾರಿಗೆ ನೌಕರರು ಮುಂದಾಗಿದ್ದು, ಮಕ್ಕಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದಾರೆ.
ದಯವಿಟ್ಟು ನಮ್ಮಪ್ಪನನ್ನು ಸರ್ಕಾರಿ ನೌಕರನಾಗಿ ಮಾಡಿ ಪುಣ್ಯ ಕಟ್ಕೊಳ್ಳಿ ಮುಖ್ಯಮಂತ್ರಿ ಸಾಹೇಬ್ರೇ ಎಂದು ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಸಾರಿಗೆ ನೌಕರರ ಮಕ್ಕಳು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ.
ತಮ್ಮ ಮನೆ ನಡೆಸಲು ತಮ್ಮ ತಂದೆ ಎಷ್ಟು ಕಷ್ಟ ಪಡುತ್ತಾರೆ ಎಂಬುದನ್ನು ತಮ್ಮ ತೊದಲು ನುಡಿಗಳಲ್ಲಿ ಹೇಳಿದ್ದಾರೆ. ಈ ಮಕ್ಕಳ ಕಷ್ಟಕ್ಕೆ ಸಿಎಂ ಯಡಿಯೂರಪ್ಪ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಯಾವ ರೀತಿ ಸ್ಪಂದಿಸತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.