ಮಂಗಳಮುಖಿಯರು ಸೀರೆ ಧರಿಸೋ ಹಾಗಿಲ್ಲ: ಕೇಂದ್ರ ಸಚಿವ ರಾಮದಾಸ್ ಅಠಾವಳೆ

Public TV
1 Min Read

ಹೈದರಾಬಾದ್: ಮಂಗಳಮುಖಿಯರು ಸೀರೆಯನ್ನು ಧರಿಸಬಾರದು ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠಾವಳೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಮಂಗಳಮುಖಿಯರು ಪುರುಷನೂ ಅಲ್ಲ, ಮಹಿಳೆಯೂ ಅಲ್ಲ. ಆದರೆ ಅವರು ಸಹ ನಮ್ಮ ಹಾಗೆ ಮನಷ್ಯರು. ಹೀಗಾಗಿ ಅವರು ಸೀರೆ ಉಡುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದರು.

ಈ ಅಭಿಪ್ರಾಯಕ್ಕೆ ಮಾಧ್ಯಮಗಳು ಹಾಗಾದ್ರೆ ಅವರು ಯಾವ ರೀತಿಯ ಡ್ರೆಸ್ ಧರಿಸಬೇಕು ಎಂದು ಪ್ರಶ್ನಿಸಿದ್ದಕ್ಕೆ ಸಚಿವರು, ಅವರು ಎಲ್ಲರಂತೆ ಪ್ಯಾಂಟ್ ಶರ್ಟ್ ಧರಿಸಬಹುದು. ಪುರುಷರ ಹಾಗೆ ಡ್ರೆಸ್‍ಗಳನ್ನು ಹಾಕಿಕೊಳ್ಳಬಹುದು ಎಂದು ಉತ್ತರಿಸಿದರು.

ದೇಶದಲ್ಲಿ ಸುಮಾರು 6 ಲಕ್ಷ ಜನ ಮಂಗಳಮುಖಿಯರಿದ್ದಾರೆ. ಕೇಂದ್ರ ಸರ್ಕಾರ ಮುಂದಿನ ಅಧಿವೇಶನದಲ್ಲಿ ತೃತೀಯ ಲಿಂಗಿಗಳ ಸಮುದಾಯಕ್ಕೆ ಸಂಬಂಧಪಟ್ಟಂತೆ ಹಕ್ಕು ಮತ್ತು ರಕ್ಷಣೆಗೆ ಸಂಬಂಧಿಸಿದ ಮಸೂದೆಯನ್ನು ಜಾರಿಗೆ ತರಲಿದೆ. ಅವರಿಗೆ ವಿಶೇಷ ಶಾಲೆಯನ್ನು ಪ್ರಾರಂಭಿಸಲಿದ್ದು, ಇದರಿಂದ ಅವರಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಬಹುದು ಎಂದು ಅವರು ಮಾಹಿತಿ ನೀಡಿದರು.

ಈ ಹಿಂದೆ ರಾಮದಾಸ್ ಅಠಾವಳೆ ಯಾರಾದ್ರೂ ವಂದೇ ಮಾತರಂ ಹಾಡಿಲ್ಲ ಎಂದರೆ ಅದು ತಪ್ಪಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅಷ್ಟೇ ಅಲ್ಲದೇ ಭಾರತ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ ಫಿಕ್ಸ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈಗ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ನಾಯಕರಾಗಿರುವ ಇವರು ಮಹಾರಾಷ್ಟ್ರದಿಂದ 2014ರಲ್ಲಿ ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. 1999ರಿಂದ 2009ರ ವರಗೆ ಪಂಢರಪುರದ ಸಂಸದರಾಗಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *