ಕಂದಾಯ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕ ಸಬ್ ರಿಜಿಸ್ಟ್ರಾರ್‌ಗಳ ವರ್ಗಾವಣೆ – ಸಚಿವ ಸಂಪುಟ ಒಪ್ಪಿಗೆ

Public TV
1 Min Read

– ಶಕ್ತಿ ಯೋಜನೆಗಾಗಿ ಬಸ್ ಖರೀದಿಗೆ 363 ಕೋಟಿ

ಬೆಂಗಳೂರು: ಕಂದಾಯ ಇಲಾಖೆಯಲ್ಲಿ (Revenue Department) ವರ್ಗಾವಣೆ ಪಾರದರ್ಶಕ ಮಾಡಲು ಕೌನ್ಸೆಲಿಂಗ್ ಪದ್ಧತಿಯನ್ನು ಜಾರಿಗೆ ಸರ್ಕಾರ ನಿರ್ಧರಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ಸಂಪುಟ ಒಪ್ಪುಗೆ ನೀಡಿದೆ.

ಎಫ್‌ಡಿಎ ಹೊರತುಪಡಿಸಿ ಸಬ್ ರಿಜಿಸ್ಟ್ರಾರ್‌ಗಳಿಗೆ ಈ ವರ್ಗಾವಣೆ ಅನ್ವಯ ಆಗಲಿದೆ. ಕಾರ್ಪೊರೇಷನ್ ಏರಿಯಾದಲ್ಲಿ ಇರುವ ಸಬ್‌ರಿಜಿಸ್ಟ್ರಾರ್‌ಗಳು ಸೇರಿದಂತೆ ಎಲ್ಲಾ ಹಂತದಲ್ಲೂ ಇದು ಜಾರಿಯಾಗಲಿದೆ. ಇದನ್ನೂ ಓದಿ: ಆರ್‌ಟಿಓ ಕಚೇರಿಗೆ ಆಟೋ ಡ್ರೈವರ್‌ಗಳ ಮುತ್ತಿಗೆ

ಕೌನ್ಸೆಲಿಂಗ್ ಅನ್ನು ಇಲಾಖೆಯೇ ನೋಡಿಕೊಳ್ಳಲಿದೆ. ಪಾರದರ್ಶಕತೆ ಮತ್ತು ಶೋಷಣೆ ಮುಕ್ತ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಶಕ್ತಿ ಯೋಜನೆಗೆ ಶಕ್ತಿ ತುಂಬಲು 363 ಕೋಟಿ ರೂ. ವೆಚ್ಚದಲ್ಲಿ 830 ಹೊಸ ಬಸ್ ಖರೀದಿಗೂ ಕ್ಯಾಬಿನೆಟ್ ಸಮ್ಮತಿಸಿದೆ. ಇದನ್ನೂ ಓದಿ: ಜು.8 ರಿಂದ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುಗಡೆ: ಚಲುವರಾಯಸ್ವಾಮಿ

Share This Article