ಶಿವಮೊಗ್ಗ | ಸೇತುವೆ ಮೇಲೆ ಚಲಿಸುತ್ತಿದ್ದಾಗ ಬೇರ್ಪಟ್ಟ ರೈಲಿನ ಬೋಗಿಗಳು!

Public TV
1 Min Read

ಶಿವಮೊಗ್ಗ: ನಗರದ (Shivamogga) ತುಂಗಾ ನದಿ ಸೇತುವೆ (Tunga River Railway Bridge) ಮೇಲೆ ಚಲಿಸುತ್ತಿದ್ದಾಗಲೇ ರೈಲಿನ ಬೋಗಿಗಳು ಬೇರ್ಪಟ್ಟ ಘಟನೆ ಬುಧವಾರ ನಡೆದಿದೆ.

ತಾಳಗುಪ್ಪ – ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ (Talguppa – Mysuru Express Train) ಬೋಗಿಗಳು ಬೇರ್ಪಟ್ಟಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ರೈಲು ಸಂಜೆ 5 ಗಂಟೆ ಹೊತ್ತಿಗೆ ಶಿವಮೊಗ್ಗ ರೈಲು ನಿಲ್ದಾಣದಿಂದ ಹೊರಟಿತ್ತು. ತುಂಗಾ ನದಿ ಸೇತುವೆ ಮೇಲೆ ಚಲಿಸುತ್ತಿದ್ದಾಗಲೇ ಎರಡು ಬೋಗಿಗಳ ಮಧ್ಯೆ ಇದ್ದ ಕ್ಲಿಪಿಂಗ್ ಲಾಕ್ ತುಂಡಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಕಗ್ಗಂಟಾಗಿದೆ 13ನೇ ಪಾಯಿಂಟ್ – ಸವಾಲುಗಳ ಮಧ್ಯೆ ಉತ್ಖನನಕ್ಕೆ ರೆಡಿಯಾದ ಎಸ್‌ಐಟಿ

ಇಂಜಿನ್ ಸೇರಿದಂತೆ ಉಳಿದ ಬೋಗಿಗಳು ತುಂಗಾ ನದಿ ಸೇತುವೆ ಮೇಲೆ ನಿಂತಿದ್ದವು. ಇದರಿಂದ ರೈಲಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಸಲು ಸಾಧ್ಯವಾಗಿಲ್ಲ. ಇದರಿಂದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು.

ಸುದ್ದಿ ತಿಳಿದು ರೈಲ್ವೆ ಇಂಜಿನಿಯರಿಂಗ್ ತಂಡ, ಗ್ಯಾರೇಜ್ & ಮೆಕಾನಿಕ್ ಸ್ಟಾಫ್ ಸ್ಥಳಕ್ಕೆ ಬಂದು ಲಾಕ್ ಸರಿಪಡಿಸಿದರು. ಬಳಿಕ ರೈಲು ಮೈಸೂರಿಗೆ ತೆರಳಿದೆ. ರೈಲು ನಿಗದಿತ ಸಮಯಕ್ಕಿಂತಲು ಒಂದು ಗಂಟೆ ತಡವಾಗಿದೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಮಳೆ – ಹಲವೆಡೆ ರಸ್ತೆಗಳು ಜಲಾವೃತ

Share This Article