ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ದುರಂತ – ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವು

1 Min Read

ಚಿಕ್ಕೋಡಿ: ಹಿಡಕಲ್ ಜಲಾಶಯದ (Hidkal Dam) ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು (Boys) ಸಾವನ್ನಪ್ಪಿದ ಘಟನೆ ಹುಕ್ಕೇರಿ ತಾಲೂಕಿನ ಹಳೆ ಗುಡಗನಟ್ಟಿ ಗ್ರಾಮದ ಹಿನ್ನೀರಿನಲ್ಲಿ ನಡೆದಿದೆ.

ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಐದು ಜನ ಸ್ನೇಹಿತರು ಈಜಲು ತೆರಳಿದ್ದರು. ಐವರ ಪೈಕಿ ಈಗ ಇಬ್ಬರು ಮೃತಪಟ್ಟಿದ್ದಾರೆ. ಇದನ್ನೂ ಓದಿ: 8 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ – 600 ಚೀಲಗಳಿದ್ದ ಲಾರಿ ಜಪ್ತಿ

ಕೃಷ್ಣಾ ವಿಠ್ಠಲ ಖಾನಾಪೂರಿ(14), ಪ್ರಜ್ವಲ್‌ ಮುತ್ತೆಪ್ತಾ ಗೋಕಾರ(14) ಮೃತ ಬಾಲಕರು. ಮೃತ ಬಾಲಕರು ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ನಿವಾಸಿಗಳು

ಶಾಲೆ ರಜೆ ಹಿನ್ನೆಲೆಯಲ್ಲಿ ಸ್ನೇಹಿತರು ಈಜಲು ತೆರಳಿದ್ದರು. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share This Article