ನವದೆಹಲಿ: ಸುಂಕ ಸಮರ ಆರಂಭಿಸಿದ ಅಮೆರಿಕಕ್ಕೆ (USA) ಭಾರತ (India) ಮತ್ತೆ ತಿರುಗೇಟು ನೀಡಿದ್ದು, ಬೋಯಿಂಗ್ P-8I ವಿಮಾನವನ್ನು ಖರೀದಿಸದೇ ಇರಲು ನಿರ್ಧರಿಸಿದೆ ಎಂದು ವರದಿಯಾಗಿದೆ.
6 ಪಿ-81 ವಿಮಾನ ಖರೀದಿಗೆ ಭಾರತ ಮುಂದಾಗಿತ್ತು. ಆದರೆ ಈಗ ಕಡಲಿನಲ್ಲಿ ಗಸ್ತು ಕಾಯುವ ಈ ವಿಮಾನ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.
2009 ರಲ್ಲಿ ಭಾರತ 8 ವಿಮಾನ ಖರೀದಿಗೆ 2.2 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. 2016 ರಲ್ಲಿ 4 ವಿಮಾನ ಖರೀದಿಸಿತ್ತು. ಭಾರತದ ಸಮುದ್ರದ ಮೇಲೆ ನಿಗಾ ಇಡಲು ಭಾರತೀಯ ನೌಕಾ ಸೇನೆಗೆ ಒಟ್ಟು 18 ಪಿ-81 ವಿಮಾನಗಳ ಅಗತ್ಯವಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ: ಟ್ರಂಪ್‌ಗೆ ಮೋದಿ ಗುದ್ದು
ಮೇ 2021 ರಲ್ಲಿ ಆರು ಹೆಚ್ಚುವರಿ ವಿಮಾನಗಳ ಮಾರಾಟಕ್ಕೆ ಅಮೆರಿಕ ಸರ್ಕಾರ ಅನುಮೋದನೆ ನೀಡಿತ್ತು. ಆರಂಭದಲ್ಲಿ ಈ ವಿಮಾನ ಖರೀದಿಗೆ 2.42 ಬಿಲಿಯನ್ ಡಾಲರ್ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳು ಮತ್ತು ಇತರ ಜಾಗತಿಕ ಸಮಸ್ಯೆಯಿಂದ ಖರೀದಿ ವೆಚ್ಚ 3.6 ಬಿಲಿಯನ್ ಡಾಲರ್‌ಗೆ ಈಗ ಏರಿಕೆಯಾಗಿದೆ. ಇದನ್ನೂ ಓದಿ: ಟ್ರಂಪ್ ಸುಂಕ ಶಾಕ್ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್ ಭೇಟಿ
ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದ್ದಕ್ಕೆ ಡೊನಾಲ್ಡ್ ಟ್ರಂಪ್ (Donald Trump) ಭಾರತದ ವಸ್ತುಗಳ ಮೇಲೆ 25% ತೆರಿಗೆ ವಿಧಿಸಿದ್ದರು. ಈಗ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ಹಾಕಿದ್ದಾರೆ. ಹೀಗಾಗಿ ಈಗ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಕೆಲ ವಸ್ತುಗಳ ಮೇಲೆ 50% ಸುಂಕ ವಿಧಿಸಲಾಗಿದೆ.